ಜೀಪನ್ನು ರಸ್ತೆಯಲ್ಲೇ ನಿಲ್ಲಿಸಿ ಪೊಲೀಸರಿಂದ ಕಾನೂನು ಉಲ್ಲಂಘನೆ
ಕುಂಬಳೆ: ಪೊಲೀಸ್ ಜೀಪನ್ನು ರಸ್ತೆಯಲ್ಲೇ ನಿಲ್ಲಿಸಿ ಸಂಚಾರಕ್ಕೆ ಅಡಚಣೆ ಸೃಷ್ಟಿಸಿದ ಬಗ್ಗೆ ದೂರಲಾಗಿದೆ. ನಿನ್ನೆ ಸಂಜೆ ಕುಂಬಳೆ ಪೇಟೆಯ ಸರ್ಕಲ್ ಬಳಿ ಈ ಘಟನೆ ನಡೆದಿದೆ. ಬೇಡಗಂ ಠಾಣೆಯ ಪೊಲೀಸ್ ಜೀಪನ್ನು ಟ್ರಾಫಿಕ್ ಲೈನ್‌ನೊಳಗೆ ರಸ್ತೆಯಲ್ಲಿ ನಿಲ್ಲಿಸಿ ಅದರಲ್ಲಿದ್ದವರು ಚಹಾ ಕುಡಿಯಲು ತೆರಳಿದ್ದರೆನ್ನಲಾಗಿದೆ. ಜನರು ಕಿಕ್ಕಿರಿದಿರುವ ರಸ್ತೆಯಲ್ಲಿ ಈ ರೀತಿಯಲ್ಲಿ ಪೊಲೀಸರೇ ಕಾನೂನು ಉಲ್ಲಂಘಿಸಿ ತಮ್ಮ ಜೀಪನ್ನು ನಿಲ್ಲಿಸಿರುವುದು ಕುಂಬಳೆಯಲ್ಲಿ ಚರ್ಚಾ ವಿಷಯವಾಗಿದೆ. ಕಾನೂನು ಪಾಲಿಸಬೇಕಾದವರೇ ಈ ರೀತಿಯಲ್ಲಿ ಉಲ್ಲಂಘಿಸಿದರೆ ಹೇಗೆ ಎಂದು ಜನರು ಪ್ರಶ್ನಿಸುತ್ತಿದ್ದಾರೆ.