ಜೀಪು ಢಿಕ್ಕಿ ಹೊಡೆದು ವ್ಯಕ್ತಿ ಮೃತ್ಯು
ಕಾಸರಗೋಡು: ಮನೆ ಅಗತ್ಯಕ್ಕೆ ಸಾಮಗ್ರಿ ಖರೀದಿಸಲು ತೆರಳಿದ ವ್ಯಕ್ತಿ ಜೀಪು ಢಿಕ್ಕಿ ಹೊಡೆದು ಮೃತಪಟ್ಟ ಘಟನೆ ನಡೆದಿದೆ. ಇರಿಯಾ ಮುಟ್ಟಿಚ್ಚರಲ್ ಕೋಪಾಳಂ ಮೂಲೆಯ ತಂಬಾನ್ (62) ಎಂಬವರು ಮೃತಪಟ್ಟ ವ್ಯಕ್ತಿ. ನಿನ್ನೆ ಸಂಜೆ ಮುಟ್ಟಿಚ್ಚರಲ್ ತಿರುವಿನಲ್ಲಿ ಅಪಘಾತವುಂಟಾಗಿದೆ. ಎಣ್ಣಪ್ಪಾರ ಭಾಗಕ್ಕೆ ತೆರಳುತ್ತಿದ್ದ ಜೀಪು ಇವರಿಗೆ ಢಿಕ್ಕಿ ಹೊಡೆದಿದೆ. ಇದರಿಂದ ಗಂಭೀರ ಗಾಯಗೊಂಡ ಇವರನ್ನು ಮಂಗಳೂರಿನ ಆಸ್ಪತ್ರೆಗೆ ತಲುಪಿ ಸಿದರೂ ಜೀವರಕ್ಷಿಸಲಾಗಲಿಲ್ಲ.
ಮೃತರು ಪತ್ನಿ ಕಾರ್ತ್ಯಾಯಿನಿ, ಮಕ್ಕಳಾದ ಅಜಿತ, ಸಜಿತ, ಅಳಿಯಂದಿರಾದ ಶಶಿ, ಮುರಳಿ ಮೊದಲಾದವರನ್ನು ಅಗಲಿದ್ದಾರೆ.