ಟ್ಯಾಂಕರ್ ಲಾರಿ-ಸ್ಕೂಟರ್ ಢಿಕ್ಕಿ ಆಸ್ಪತ್ರೆ ನೌಕರನಿಗೆ ಗಂಭೀರ
ಕುಂಬಳೆ: ಮೊಗ್ರಾಲ್ ರಾಷ್ಟ್ರೀಯ ಹೆದ್ದಾರಿಯಲ್ಲಿ ನಿನ್ನೆ ಬೆಳಿಗ್ಗೆ ಸಂಭವಿಸಿದ ವಾಹನ ಅಪಘಾತದಲ್ಲಿ ಆಸ್ಪತ್ರೆ ನೌಕರನೋರ್ವ ಗಂಭೀರ ಗಾಯಗೊಂ ಡಿದ್ದಾರೆ. ಪನಯಾಲ್ ಪಾಕದ ನಾರಾಯಣನ್ ಎಂಬವರ ಪುತ್ರ ಹರಿಪ್ರಸಾದ್ (೨೪) ಗಾಯಗೊಂಡಿದ್ದು, ಇವರನ್ನು ಮಂಗಳೂರಿನ ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ.
ಹರಿಪ್ರಸಾದ್ ಸಂಚರಿಸುತ್ತಿದ್ದ ಸ್ಕೂಟರ್ ಹಾಗೂ ಎದುರಿನಿಂದ ಬಂದ ಟ್ಯಾಂಕರ್ ಲಾರಿ ಪರಸ್ಪರ ಢಿಕ್ಕಿ ಹೊಡೆದು ಅಪಘಾತವುಂಟಾಗಿದೆ. ಮಂಗಳೂರಿನ ಫಾದರ್ ಮುಲ್ಲರ್ ಆಸ್ಪತ್ರೆಯಲ್ಲಿ ನೌಕರನಾದ ಹರಿಪ್ರಸಾದ್ ನಿನ್ನೆ ಬೆಳಿಗ್ಗೆ ಸ್ಕೂಟರ್ನಲ್ಲಿ ಮನೆಗೆ ಮರಳುತ್ತಿದ್ದಾಗ ಅಪಘಾತ ಸಂಭವಿಸಿದೆ. ಅಪಘಾತ ಬಗ್ಗೆ ಹರಿಪ್ರಸಾದ್ ತಂದೆ ನಾರಾಯಣನ್ ನೀಡಿದ ದೂರಿನಂತೆ ಕುಂಬಳೆ ಪೊಲೀಸರು ಕೇಸು ದಾಖಲಿಸಿಕೊಂಡಿದ್ದಾರೆ.