ಡಿವೈಎಫ್ಐ ವತಿಯಿಂದ ಹಳೆ ಸಾಮಗ್ರಿಗಳ ಸಂಗ್ರಹ
ಮಂಜೇಶ್ವರ : ವಯನಾಡ್ ಪ್ರಕೃತಿ ದುರಂತದಲ್ಲಿ ಮನೆ ನಷ್ಟವಾದವರಿಗೆ ಮನೆ ನಿರ್ಮಿಸಿ ನೀಡಲು ಡಿವೈಎಫ್ಐ ರಾಜ್ಯದಾದ್ಯಂತ ವಿವಿಧ ಚಟುವಟಿಕೆಗಳನ್ನು ನಡೆಸುತ್ತಿದೆ. ಮನೆಮನೆ ಸಂದರ್ಶಿಸಿ ಹಳೆ ಗುಜರಿ ಸಾಮಾಗ್ರಿಗಳನ್ನು ಹಾಗೂ ವಿವಿಧ ಚಾಲೆಂಜï ನಡೆಸಿ ಧನ ಸಂಗ್ರಹಿಸುವ ಚಟುವಟಿಕೆ ನಡೆಸುತ್ತಿರುವುದಾಗಿ ತಿಳಿಸಿದ್ದಾರೆ. ಸಿಪಿಎಂ ಮಂಜೇಶ್ವರ ಲೋಕಲ್ ಸಮಿತಿ ಸದಸ್ಯ, ಮಂಜೇಶ್ವರ ಸೇವಾ ಸಹಕಾರಿ ಬ್ಯಾಂಕ್ ನೌಕರ ದಯಾಕರ ಹೊಸಂಗಡಿ ಅವರ ಕುಟುಂಬ ತಮ್ಮ ಮನೆಯ ಹಳೆ ಸಾಮಗ್ರಿಗಳನ್ನು ಹಾಗೂ ತನ್ನ ಹಳೆ ಬೈಕ್ನ್ನು ಡಿವೈಎಫ್ಐ ಮಂಜೇಶ್ವರ ಬ್ಲಾಕ್ ಸಮಿತಿ ಅಧ್ಯಕ್ಷ ವಿನಯ್ ಕುಮಾರ್ ಬಾಯಾರು ರವರಿಗೆ ಹಸ್ತಾಂತರಿಸಿದರು. ಕೃಷಿ ಕಾರ್ಮಿಕ ಯೂನಿಯನ್ ಏರಿಯಾ ಕಾರ್ಯದರ್ಶಿ ಕೆ ಕಮಲಾಕ್ಷ, ಸಿಐಟಿಯು ಏರಿಯಾ ಅಧ್ಯಕ್ಷ ಪ್ರಶಾಂತ್ ಕನಿಲ, ಸಿಪಿಎಂ ಲೋಕಲ್ ಕಾರ್ಯದರ್ಶಿ ಕರುಣಾಕರ ಶೆಟ್ಟಿ, ಡಿವೈಎಫ್ಐ ವಿಲೇಜ್ ಕಾರ್ಯದರ್ಶಿ ಲೋಹಿತ್, ಅಕ್ಷಿತ್, ಮಹೇಶ್ ಕುಮಾರ್, ಪ್ರಭಾಕರ ಶೆಟ್ಟಿ, ಗಂಗಾಧರ ದುರ್ಗೀಪಳ್ಳ ಉಪಸ್ಥಿತರಿದ್ದರು.