ತಲಶ್ಶೇರಿ- ಮಾಹಿ ಬೈಪಾಸ್ ದಾಟಲು ಟೋಲ್ ದರ ನಿಗದಿ

ಕಣ್ಣೂರು: ತಲಶ್ಶೇರಿ- ಮಾಹಿ ಬೈಪಾಸ್ ಮೂಲಕದ ಸಂಚಾರಕ್ಕೆ ವಾಹನಗಳು ನೀಡಬೇಕಾದ ಟೋಲ್ ದರಗಳನ್ನು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ನಿಗದಿಪಡಿಸಿದೆ. ಬೈಪಾಸ್ ದಾಟಲು ಕಾರು, ಜೀಪು, ವ್ಯಾನ್ ಮೊದಲಾದ ಖಾಸಗಿ ವಾಹನಗಳಿಗೆ ೬೫ ರೂ. ನಿಗದಿಪಡಿಸಲಾಗಿದೆ. ಇಕ್ಕಡೆಗೂ ಒಂದೇ ದಿನ ಸಂಚರಿಸುವುದಾಗಿದ್ದಲ್ಲಿ ೧೦೦ ರೂ. ನೀಡಬೇಕಾಗಿದೆ. ೫೦ ಪ್ರಯಾಣಿಕರಿಗೆ ೨೧೯೫ ರೂ. ಎಂಬ ರೀತಿಯಲ್ಲಿ ಪ್ರತೀ ತಿಂಗಳ ದರವನ್ನು ನಿಗದಿಪಡಿಸಲಾಗಿದೆ. ಜಿಲ್ಲೆಯಲ್ಲಿ ನೋಂದಾಯಿಸಿದ ಟ್ಯಾಕ್ಸಿ ವಾಹನಗಳಿಗೆ ೩೫ ರೂ. ಒಮ್ಮೆ ಸಂಚರಿಸಲಿರುವ ದರವಾಗಿದೆ. ಮಿನಿ ಬಸ್, ಸಣ್ಣ ವಾಣಿಜ್ಯ ವಾಹನಗಳಿಗೆ  ಒಂದು ಭಾಗಕ್ಕಿರುವ ಪ್ರಯಾಣಕ್ಕೆ ೧೦೫ ರೂ, ಒಂದೇ ದಿವಸ ಎರಡೂ ಕಡೆಗಳಿಗೂ ಸಂಚರಿಸುವುದ ಕ್ಕಿರುವ ದರ ೧೬೦ ರೂ.ವಾಗಿದೆ.

ಬಸ್‌ಗಳಿಗೆ, ಲಾರಿಗಳಿಗೆ ಒಂದು ಭಾಗಕ್ಕಿರುವ ಸಂಚಾರಕ್ಕೆ ೨೨೫ ರೂ. ಒಂದೇ ದಿನ ಎರಡೂ ಕಡೆಗಳಿಗೂ ಸಂಚರಿಸಲು ೩೩೫ ರೂ. ನೀಡಬೇಕಾಗಿದೆ. ೮೧೦೫ ರೂ. ಪ್ರತೀ ತಿಂಗಳ ಪಾಸ್ ಕೂಡಾ ಲಭ್ಯವಿದೆ. ೩ ಆಕ್ಸಿಲ್ ವಾಹನಗಳಿಗೆ  ೨೪೫ ರೂ, ಇಕ್ಕಡೆ ಸಂಚಾರಕ್ಕೆ ೩೫೫, ೪ರಿಂದ ೬ವರೆಗಿನ ಆಕ್ಸಿಲ್ ಇರುವ ವಾಹನಗಳಿಗೆ ಒಂದು ಭಾಗಕ್ಕೆ ೩೫೦ ರೂ. ನೀಡಬೇಕಾಗಿದೆ. ಏಳು ಆಕ್ಸಿಲ್‌ಗಿಂತ ಮೇಲಿರುವ ವಾಹನಗಳಿಗೆ ಒಂದು ಭಾಗಕ್ಕೆ ೪೨೫ ರೂ, ಇಕ್ಕಡೆಗೆ ೬೪೦ ರೂ.ವಾಗಿದೆ ದರ.

Leave a Reply

Your email address will not be published. Required fields are marked *

You cannot copy content of this page