ದತ್ತಿ ನಿಧಿ ಪ್ರಶಸ್ತಿ ಪ್ರದಾನ ಹಾಗೂ ಕನ್ನಡ ಸಂಸ್ಕೃತಿ ಉತ್ಸವಕ್ಕೆ ಚಾಲನೆ
ಸೀತಾಂಗೋಳಿ: ಕಾಸರಗೋಡು ಜಿಲ್ಲಾ ಕನ್ನಡ ಪತ್ರಕರ್ತರ ಕ್ಷೇಮಾಭಿವೃದ್ಧಿ ಸಂಘ, ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರ, ಕರ್ನಾಟಕ ಸರಕಾರ ಪ್ರವಾಸೋದ್ಯಮ ಇಲಾಖೆ ಹಾಗೂ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ ಬೆಂಗಳೂರು ಇದರ ಆಶ್ರಯದಲ್ಲಿ ದತ್ತಿನಿಧಿ ಪ್ರಶಸ್ತಿ ಪ್ರಧಾನ ಹಾಗೂ ಕನ್ನಡ ಸಂಸ್ಕೃತಿ ಉತ್ಸವ ಇಂದು ಬೆಳಿಗ್ಗೆ ಸೀತಾಂಗೋಳಿಯ ಅಲಯನ್ಸ್ ಕನ್ವೆನ್ಶನ್ ಸೆಂಟರ್ನಲ್ಲಿ ವಿದ್ಯುಕ್ತವಾಗಿ ಆರಂಭಗೊಂಡಿತು.
ಈ ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರಗಳಲ್ಲಿ ತಮ್ಮದೇ ಆದ ಮಹತ್ತರ ಕೊಡುಗೆಗಳನ್ನು ನೀಡಿದ ಗಣ್ಯ ವ್ಯಕ್ತಿಗಳಾದ ವಿಶ್ವೇಶ್ವರ ಭಟ್, ಚೇತನಾ ಬೆಳಗೆರೆ, ಅಶೋಕ್ ಚಂದರಗಿ, ಬಿ. ರವೀಂದ್ರ ಶೆಟ್ಟಿ, ಡಿ. ಸುಬ್ರಾಯ ಭಟ್ ಭಟ್ಕಳ, ಇಬ್ರಾಹಿಂ ಅಡ್ಕಸ್ಥಳ, ವಾಲ್ಟರ್ ನಂದಳಿಕೆ, ಎಚ್.ಬಿ. ಮದನ್ ಗೌಡ, ನವೀನ್ ಕೆ. ಇನ್ನ, ಡಾ. ನಂದಕುಮಾರ್ ಹೆಗಡೆ, ಹೆಚ್.ಟಿ. ಅನಿಲ್ ಮಡಿಕೇರಿ, ಸದಾನಂದ ಜೋಶಿ ಬೀದರ್, ದಿವಾಕರ, ಬಿ.ಬಿ. ಶೆಟ್ಟಿ ಕಾಪು ಮತ್ತು ಬಿ.ಪಿ. ಶೇಣಿಯವರಿಗೆ ದತ್ತಿ ನಿಧಿ ಪ್ರಶಸ್ತಿ ಪುರಸ್ಕಾರ ನೀಡಿ ಗೌರವಿಸಲಾಗು ವುದು. ಇದರ ಜತೆಗೆ ಅಂತಾರಾಷ್ಟ್ರೀಯ ಆರ್ಯಭಟ ಪ್ರಶಸ್ತಿ ಪುರಸ್ಕೃತ ಸಾಮಾಜಿಕ ಹಾಗೂ ಧಾರ್ಮಿಕ ನೇತಾರ ಕೆ.ಕೆ. ಶೆಟ್ಟಿ ಮತ್ತು ಅಂತಾರಾಷ್ಟ್ರೀಯ ಖ್ಯಾತಿಯ ವಾಸ್ತುಶಿಲ್ಪಿ ರವೀಂದ್ರ ಕುಮಾರ್ ಬೆಂಗಳೂರು ಇವರಿಗೆ ಪೌರ ಸನ್ಮಾನ ನೀಡಲಾಗುವುದು. ಕಾರ್ಯಕ್ರಮದ ಬಳಿಕ ವಿವಿಧ ಕಲಾ-ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿರುವುದು.