ದೇಶಮಂಗಲ: ಧ್ವಜಸ್ತಂಭ ಮುರಿದು ಓಂಕಾರ ಧ್ವಜ ನಾಶಕ್ಕೆ ಯತ್ನ; ಪ್ರತಿಭಟನೆ

ಮೊಗ್ರಾಲ್ ಪುತ್ತೂರು: ದೇಶ ಮಂಗಲ  ಶ್ರೀ ಕಾಳಿಕಾ ವಿಶ್ವಕರ್ಮ ಭಜನಾ ಮಂದಿರದ ಆವರಣದಲ್ಲಿ ಓಂಕಾರ ಧ್ವಜವಿರುವ ಸ್ತಂಭವನ್ನು ಮುರಿದ ಕಿಡಿಗೇಡಿಗಳು ಧ್ವಜ ನಾಶಕ್ಕೆ ವಿಫಲ ಯತ್ನ ನಡೆಸಿದ್ದಾರೆ. ಭಜನಾ ಮಂದಿರದ ಮುಂಭಾಗದಲ್ಲಿ ಕಬ್ಬಿಣದ ಸ್ತಂಭವನ್ನು ಕೆಲವು ವರ್ಷಗಳ ಹಿಂದೆ ಸ್ಥಾಪಿಸಲಾಗಿತ್ತು.  ಬುಧವಾರ ರಾತ್ರಿ ಧ್ವಜಸ್ತಂಭವನ್ನು ಬಗ್ಗಿಸಿ ನೆಲದ ಸಮಾ ನಾಂತರಕ್ಕೆ  ಬಳಿಕ ಏನೂ ಮಾಡ ಲಾಗದೆ ಕಿಡಿಗೇಡಿಗಳು ಪರಾರಿಯಾ ಗಿದ್ದಾರೆ. ಕಿಡಿಗೇಡಿಗಳು ಪರಾರಿಯಾ ಗುವ ವೇಳ ದ್ವಿಚಕ್ರ ವಾಹನ ಬಿದ್ದ ಕುರುಹುಗಳು ಸ್ಥಳದಲ್ಲಿ ಪತ್ತೆಯಾಗಿದೆ.

ಸ್ಥಳದಲ್ಲಿ ಶ್ರೀ ಕಾಳಿಕಾ ವಿಶ್ವಕರ್ಮ ದೇವರ ಸಾನಿಧ್ಯದ ಜತೆಗೆ ಶ್ರೀನಾಗ ಮತ್ತು ಶ್ರೀ ಗುಳಿಗ ದೈವವನ್ನು 1982ರಿಂದಲೇ ಆರಾಧಿಸಲಾಗುತ್ತಿದೆ.  ಘಟನೆಯ ಮಾಹಿತಿ ತಿಳಿದು ಪಂಚಾಯತ್ ಸದಸ್ಯರಾದ ಪ್ರಮೀಳ ಮಜಲ್, ಉದಯ ಅಮ್ಚಿಕೆರೆ, ಮುಜೀಬ್ ಕಂಬಾರು ಹಾಗೂ ವಿವಿಧ ಪಕ್ಷಗಳ ನೇತಾರರಾದ ಕುಂಞಿರಾಮನ್ ಮಜಲ್, ರಫೀಕ್ ಕಂಬಾರು, ವಿವಿಧ ಹಿಂದೂ ಸಂಘಟನೆಗಳ ಮುಖಂಡರು ಸ್ಥಳವನ್ನು ಸಂದರ್ಶಿಸಿ ಘಟನೆಯನ್ನು ಖಂಡಿಸಿದ್ದಾರೆ. ಘಟನೆಗೆ ಸಂಬಂಧಿಸಿ ಪತ್ತೆಹಚ್ಚಿ ಕಾನೂನು ಕ್ರಮ ಕೈಗೊಳ್ಳುವಂತೆ ಭಜನಾ ಮಂದಿರದ ಪದಾಧಿಕಾರಿಗಳು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ, ಕಾಸರಗೋಡು ಜಿಲ್ಲಾಧಿಕಾರಿ, ಉಪವಿಭಾಗೀಯ ದಂಡಾಧಿಕಾರಿ ಹಾಗೂ ಕಾಸರಗೋಡು ಪೊಲೀಸ್ ಠಾಣಾಧಿಕಾರಿಯವರಿಗೆ ದೂರು ಸಲ್ಲಿಸಿದ್ದಾರೆ.

ಇದೇ ವೇಳೆ ಕಿಡಿಗೇಡಿಗಳ ಕೃತ್ಯವನ್ನು ಖಂಡಿಸಿ ಬೃಹತ್ ಪ್ರತಿಭಟನಾ ಸಭೆ ನಡೆಸಲಾಯಿತು. ಮಂದಿರದ ಸ್ಥಾಪಕ ಪದಾಧಿಕಾರಿ ಎಂ. ಪುರುಷೋತ್ತಮ ಆಚಾರ್ಯ ಕಂಬಾರು, ಶ್ರೀ  ಆಂಜನೇಯ ಕ್ಷೇತ್ರದ ಶ್ರೀ ಆಂಜನೇಶ್ವರ ಸ್ವಾಮೀಜಿ ದೇಶಮಂಗಲ, ಪಂಚಾಯತ್ ಸದಸ್ಯರಾದ ಉದಯ ಅಮ್ಚಿಕೆರೆ, ಸಂಪತ್ ಪೆರ್ನಡ್ಕ, ಪ್ರಸನ್ನ ಕಾರಂತ ದೇಶಮಂಗಲ, ಲೋಕೇಶ್ ಎಂ.ಬಿ. ಆಚಾರ್ ಕಂಬಾರು,ಚಂದ್ರಶೇಖರ ಬಳ್ಳೂರು, ಭುವನೇಶ್ ಆಚಾರ್ಯ ತಾಳಿಪಡ್ಪು ಇವರು ಘಟನೆಯನ್ನು ಖಂಡಿಸಿ ಮಾತನಾಡಿದರು.

Leave a Reply

Your email address will not be published. Required fields are marked *

You cannot copy content of this page