ದೈಗೋಳಿಯಲ್ಲಿ ಸೆರೆಗೀಡಾದ ಕುಖ್ಯಾತ ಕಳವು ಆರೋಪಿಯನ್ನು ವಿವಿಧೆಡೆ ಕರೆದೊಯ್ದು ಮಾಹಿತಿ ಸಂಗ್ರಹ

ಮಂಜೇಶ್ವರ: ನಂಬ್ರಪ್ಲೇಟಿಲ್ಲದ ಕಾರಿನಲ್ಲಿ ಮಾರಕಾಯುಧಗಳ ಸಹಿತ  ಸಂಚರಿಸುತ್ತಿದ್ದ ವೇಳೆ ಸೆರೆಗೀಡಾದ ಕುಖ್ಯಾತಕಳವು ತಂಡದ ಸದಸ್ಯನಾದ ಕರ್ನಾಟಕ ತುಮಕೂರು  ಕಚ್ಚೇರಿ ಮೊಹಲ್‌ನ ಸಯ್ಯಿದ್ ಅಮಾನ್ (22)ನನ್ನು ಪೊಲೀಸರು ವಿವಿಧೆಡೆ ಕರೆದೊಯ್ದು ಮಾಹಿತಿ ಸಂಗ್ರಹಿಸಿದರು.

ಆರೋಪಿಯನ್ನು ಮಂಜೇಶ್ವರ ಠಾಣೆ, ದೈಗೋಳಿ ಎಂಬಿಡೆಗಳಿಗೆ ಕರೆದೊಯ್ದು ಮಾಹಿತಿ ಸಂಗ್ರಹಿಸಲಾ ಯಿತು. ಬಳಿಕ ನಿನ್ನೆ ಸಂಜೆ ಆತನನ್ನು ಮರಳಿ ನ್ಯಾಯಾಲಯದಲ್ಲಿ ಹಾಜರುಪಡಿಸಲಾಯಿತು. ಆದಿತ್ಯ ವಾರ ಮುಂಜಾನೆ ೪ ಗಂಟೆಗೆ ಸಯ್ಯಿದ್ ಅಮಾನ್ ಹಾಗೂ ಉಳ್ಳಾಲಕೋಡಿ ಹೌಸ್‌ನ ಫೈಸಲ್ (36) ಎಂಬಿವರನ್ನು ದೈಗೋಳಿ ಯಿಂದ ಮಂಜೇಶ್ವರ ಪೊಲೀಸರು ನಾಗರಿಕರ ಸಹಾಯದಿಂದ ಸೆರೆಹಿಡಿದರು. ಈ ವೇಳೆ ಕಾರಿನಲ್ಲಿದ್ದ ನಾಲ್ಕು ಮಂದಿ ಓಡಿ ಪರಾರಿಯಾಗಿದ್ದಾರೆ. ಅವರಿಗಾಗಿ ಶೋಧ ನಡೆಸಲಾಗುತ್ತಿದೆಯೆಂದು ಪೊಲೀಸರು ತಿಳಿಸಿದ್ದಾರೆ.

You cannot copy contents of this page