ನಗರದಲ್ಲಿ ಪೋಲಾಗುತ್ತಿರುವ ಕುಡಿಯುವ ನೀರು: ತಡೆಗೆ ಕ್ರಮವಿಲ್ಲ

ಕಾಸರಗೋಡು: ಕುಡಿಯುವ ನೀರಿಗಾಗಿ ಜನರು ಪರದಾಡುತ್ತಿರು ವಂತೆಯೇ ಜಲಪ್ರಾಧಿಕಾರದ ನೀರು ವ್ಯಾಪಕವಾಗಿ ಪೋಲಾಗುತ್ತಿದೆ. ಕಾಸರಗೋಡು ನಗರದ ಹೊಸ ಬಸ್ ನಿಲ್ದಾಣ ಪರಿಸರದಲ್ಲಿ ಕಳೆದ ಹಲವು ದಿನಗಳಿಂದ ನೀರು ಪೋಲಾಗುತ್ತಿದ್ದರೂ ಅದರ ಪರಿಹಾರಕ್ಕೆ ಯಾರೂ ಮುಂದಾಗಿಲ್ಲ. ಕೇರಳ ಜಲಪ್ರಾಧಿಕಾರ ನಗರದ  ವಿವಿಧೆಡೆ ಸರಬರಾಜು ಮಾಡುವ ನೀರಿನ ಪೈಪ್ ಬಿರುಕು ಬಿಟ್ಟಿರುವುದೇ ಈ ಸ್ಥಿತಿಗೆ ಕಾರಣ ವೆನ್ನಲಾಗಿದೆ. ಲಕ್ಷಗಟ್ಟಲೆ ಲೀಟರ್ ನೀರು ಈ ರೀತಿಯಲ್ಲಿ ಪೋಲಾ ಗುತ್ತಿದ್ದರೂ ಇದನ್ನು ಅಧಿಕಾರಿಗಳು ಕಂಡೂ ಕಾಣದಂತೆ ವರ್ತಿಸುತ್ತಿದ್ದಾರೆಂದು  ಸ್ಥಳೀಯರು ಆರೋಪಿಸುತ್ತಿದ್ದಾರೆ.

You cannot copy contents of this page