ನಾರಂಪಾಡಿ ಶ್ರೀ ಉಮಾಮಹೇಶ್ವರ ಕ್ಷೇತ್ರದ ವಿವಿಧ ಸಮಿತಿಗಳ ಸಭೆ
ಬದಿಯಡ್ಕ: ನಾರಂಪಾಡಿ ಶ್ರೀ ಉಮಾಮಹೇಶ್ವರ ಕ್ಷೇತ್ರದ ಬ್ರಹ್ಮಕಲಶೋತ್ಸವ ಸಮಿತಿ, ಸೇವಾಸಮಿತಿ, ಕಾರ್ಯಕಾರೀ ಸಮಿತಿಯ ಸಭೆ ಶ್ರೀಕ್ಷೇತ್ರದಲ್ಲಿ ಜರಗಿತು. ಬ್ರಹ್ಮ ಕಲಶೋತ್ಸವದ ಸಮಿತಿ ಅಧ್ಯಕ್ಷ ನಿತ್ಯಾನಂದ ಶೆಣೈ ಬದಿಯಡ್ಕ ಅಧ್ಯಕ್ಷತೆ ವಹಿಸಿದ್ದರು. 2025 ಫೆಬ್ರವರಿ 2ರಿಂದ 10ರ ವರೆಗೆ ಜರುಗುವ ಬ್ರಹ್ಮಕಲಶೋತ್ಸವವನ್ನು ಯಶಸ್ವಿಗೊಳಿಸಬೇಕೆಂದು ಕರೆಯಿತ್ತರು. ಸಮಿತಿ ಉಪಾಧ್ಯಕ್ಷ ತಲೇಕ ಸುಬ್ರಹ್ಮಣ್ಯ ಭಟ್ ಕ್ಷೇತ್ರದಲ್ಲಿ ಇನ್ನು ಆಗಬೇಕಾದ ಜೀಣೋದ್ದಾರ ಕೆಲಸಕಾರ್ಯಗಳ ಬಗ್ಗೆ ವಿವರಿಸಿದರು. ಉಪಾಧ್ಯಕ್ಷ ಮಧುಕರ ರೈ ಕೊರೆಕ್ಕಾನ ಮಾತನಾಡಿದರು. ಕ್ಷೇತ್ರದ ಪವಿತ್ರಪಾಣಿ ಕಿರಣಕುಣಿಕುಳ್ಳಾಯ, ಹಿರಿಯರಾದ ಸಂಜೀವ ಶೆಟ್ಟಿ ಮೊಟ್ಟ ಕುಂಜ, ಎಸ್.ಎನ್ ಮಯ್ಯ, ಐತ್ತಪ್ಪ ಮವ್ವಾರು, ಕುಂಞÂರಾಮ ಗೋಸಾಡ, ರವೀಂದ್ರ ರೈ ಗೋಸಾಡ, ಹರೀಶ ನಾರಂಪಾಡಿ, ಗೋಪಾಲಕೃಷ್ಣ ಮುಂಡೋಳುಮೂಲೆ, ತ್ಯಾಂಪಣ್ಣ ಭಂಡಾರಿ, ಸತೀಶ ರೈ, ಮುತ್ತಪ್ಪ ರೈ, ವೆಂಕಟ್ರಮಣ ಭಟ್ ಪೆಲ್ತಾಜೆ, ಬಾಬು ನೆಲ್ಯಡ್ಕ, ದೇವರಾಜ್ ಭಂಡಾರಿ, ಶ್ರೀನಿವಾಸ ಅಮ್ಮಣ್ಣಾಯ ಪಾವೂರು, ಪದ್ಮನಾಭ ಮಣಿಯಾಣಿ, ವಸಂತಿ ಟೀಚರ್, ಕಲಾವತಿ ಟೀಚರ್, ರಾಜೀವಿ, ಉಪ್ಪಂಗಳ ವೆಂಕಟ್ರ ಮಣ ಭಟ್, ವಸಂತ ಪೊಡಿಪಳ್ಳ, ಸೀತಾರಾಮಕುಂಜತ್ತಾಯ ಮಾಸ್ಟರ್, ರವಿಶಂಕರ್ ಪುಣಿಂಚಿತ್ತಾಯ ವಾಲ್ತಾಜೆ ಭಾಗವಹಿಸಿದರು. ವೆಂಕಟ್ರಮಣ ಭಟ್ ಪೆಲ್ತಾಜೆ ಪ್ರಾರ್ಥನೆ ಹಾಡಿದರು. ಬ್ರಹ್ಮಕಲಶೋತ್ಸವ ಸಮಿತಿಯ ಪ್ರಧಾನ ಕಾರ್ಯದರ್ಶಿ ಬಾಲಕೃಷ್ಣ ಮಾಸ್ಟರ್ ನಾರಂಪಾಡಿ ಸ್ವಾಗತಿಸಿ, ಕೃಷ್ಣಮೂರ್ತಿ ನಡುಅಂಗಡಿ ವಂದಿಸಿದರು. ಮುಂದಿನ ಸಭೆ ಜು 28 ರಂದು ಮಧ್ಯಾಹ್ನ 2.30ಕ್ಕೆ ನಡೆಸಲು ತೀರ್ಮಾನಿಸಲಾಯಿತು.