ನಾರಾಯಣಮಂಗಲ ಶ್ರೀ ಚೀರುಂಬಾ ಭಗವತೀ ಭಜನಾ ಮಂಡಳಿಯ ನವರಾತ್ರಿ ಭಜನಾ ಮಹೋತ್ಸವ
ಕುಂಬಳೆ: ನಾರಾಯಣಮಂಗಲ ಶ್ರೀ ಚೀರುಂಬಾ ಭಗವತೀ ಭಜನಾ ಮಂಡಳಿಯ 63ನೇ ವರ್ಷದ ನವರಾತ್ರಿ ಭಜನೋತ್ಸವ ಶ್ರೀ ಚೀರುಂಬಾ ಭಗವತೀ ಕ್ಷೇತ್ರದಲ್ಲಿ ಆರಂಭಗೊAಡಿದ್ದು, ಈ ತಿಂಗಳ 11ರಂದು ಸಮಾಪ್ತಿಗೊಳ್ಳಲಿದೆ. 11ರಂದು ಬೆಳಿಗ್ಗೆ 7ಕ್ಕೆ ಗಣಪತಿ ಹೋಮ, 10.30ಕ್ಕೆ ಲಲಿತ ಸಹಸ್ರನಾಮಾರ್ಚನೆ, ಮಧ್ಯಾಹ್ನ 12ಕ್ಕೆ ಪೂಜೆ, ಅನ್ನಸಂತರ್ಪಣೆ, 12.30ರಿಂದ ಆಯುಧ ಪೂಜೆ, 1.30ರಿಂದ ಮುರಳೀಧರ ಯಾದವ್ ನಾಯ್ಕಾಪು ಮತ್ತು ಬಳಗದವರಿಂದ ಯಕ್ಷಗಾನ ತಾಳಮದ್ದಳೆ, ಸಂಜೆ 6.30ಕ್ಕೆ ದೀಪ ಪ್ರತಿಷ್ಠೆ, ಬಳಿಕ ವಿವಿಧ ಭಜನಾ ಸಂಘಗಳಿAದ ಭಜನೆ, 6.35ಕ್ಕೆ ವಿಶೇಷ ದೀಪ ಸೇವೆ, ರಾತ್ರಿ 7.30ರಿಂದ ವಾಹನಗಳಿಗೆ ಪೂಜೆ, ಅನ್ನಸಂತರ್ಪಣೆ, 10ಕ್ಕೆ ನಾಯ್ಕಾಪು ಶ್ರೀ ಶಾಸ್ತಾ ಬನದಿಂದ ಹುಲ್ಪೆ ಮೆರವಣಿಗೆ, 1ಗಂಟೆಗೆ ಮಹಾಪೂಜೆ, ದೇವಿ ದರ್ಶನ, ಮರುದಿನ ಪೂರ್ವಾಹ್ನ 6.30ಕ್ಕೆ ದೀಪ ವಿಸರ್ಜನೆ, ಮಂಗಳಾಚರಣೆ ನಡೆಯಲಿದೆ.