ನಿಧನ
ಕುಂಬಳೆ: ಕಳತ್ತೂರು ಕಾರಿಂಜೆ ನಿವಾಸಿ ವಸಂತ ಆಳ್ವ (75) ನಿಧನ ಹೊಂದಿದರು. ಪ್ರಗತಿಪರ ಕೃಷಿಕರಾಗಿದ್ದ ಇವರು ಮಹಾದೇವ ಭಜನಾ ಸಂಘದ ಸ್ಥಾಪಕ ಸದಸ್ಯರೂ ಅಲ್ಲದೆ ಹಲವಾರು ಸಂಘ-ಸಂಸ್ಥೆಗಳಲ್ಲಿ ಸಕ್ರಿಯರಾಗಿದ್ದರು. ಸಿಪಿಎಂ ಬಂಬ್ರಾಣ ಲೋಕಲ್ ಸಮಿತಿ ಮಾಜಿ ಸದಸ್ಯ, ಕರ್ಷಕ ಸಂಘ ಕುಂಬಳೆ ಏರಿಯಾ ಸದಸ್ಯನಾಗಿ ಇವರು ಸೇವೆ ಸಲ್ಲಿಸಿದ್ದರು. ಮೃತರು ಪತ್ನಿ ಜಲಜಾಕ್ಷಿ, ಮಕ್ಕಳಾದ ಅರುಣ್ ಕುಮಾರ್ ಆಳ್ವ, ನ್ಯಾಯವಾದಿ ಸತ್ಯನಾರಾಯಣ ಆಳ್ವ, ಸೊಸೆಯಂದಿರಾದ ಅಶ್ವಿತಾ, ಸುಶ್ಮಿತಾ ಸಹೋದರಿ ರತಿ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.