ನಿವೃತ್ತ ಅಧ್ಯಾಪಕ ಚೆಂಗಳಗುತ್ತು ಸುಂದರ ಶೆಟ್ಟಿ ನಿಧನ

ಕಾಸರಗೋಡು: ನುಳ್ಳಿಪ್ಪಾಡಿ ನೇತಾಜಿ ರೆಸಿಡೆನ್ಶಿಯಲ್ ಏರಿಯಾ ನಿವಾಸಿ ಚೆಂಗಳ ಗುತ್ತು ಬಟ್ಟಂಪಾರೆ  ವಿದ್ವಾನ್ ಸುಂದರ ಶೆಟ್ಟಿ (೯೩) ಇತ್ತೀಚೆಗೆ ಸ್ವ-ಗೃಹದಲ್ಲಿ ನಿಧನ ಹೊಂದಿದರು. ಜಿಲ್ಲೆಯ ಕನ್ನಡ ಶಾಲೆಗಳಲ್ಲಿ ೩೭ ವರ್ಷಗಳ ಕಾಲ ಸೇವೆ ಸಲ್ಲಿಸಿ ಕಾಸರಗೋಡು ಜಿಎಚ್‌ಎಸ್ ನಿಂದ ನಿವೃತ್ತರಾಗಿದ್ದರು. ಧಾರ್ಮಿಕ, ಸಾಮಾಜಿಕ, ಕಲಾ, ಸಾಂಸ್ಕೃತಿಕ, ಕ್ಷೇತ್ರಗಳಲ್ಲಿ ಸಕ್ರಿಯ ರಾಗಿದ್ದರು. ಪಾರೆಕಟ್ಟೆ ಗುಡ್ಡೆಮನೆ ಶ್ರೀ ವಿಷ್ಣುಮೂರ್ತಿ ದೈವಸ್ಥಾನದಲ್ಲಿ ನಾಲ್ಕೂವರೆ ದಶಕಗಳ ಕಾಲ ಗುರಿಕ್ಕಾರರಾಗಿ ಸೇವೆ ಸಲ್ಲಿಸಿದ್ದರು.

ಮೃತರು ಪತ್ನಿ ಪ್ರೇಮಾ ಶೆಟ್ಟಿ, ಮಕ್ಕಳಾದ ಬಾಲಗೋಪಾಲ ಶೆಟ್ಟಿ, ಲೋಕೇಶ್ ಶೆಟ್ಟಿ, ಕಿಶೋರ್ ಕುಮಾರ್ ಶೆಟ್ಟಿ, ಶಾಲಿನಿ ಶೆಟ್ಟಿ, ಅಳಿಯ ಜಯಂತ್‌ರಾಜ್ ಶೆಟ್ಟಿ, ಸೊಸೆಯಂ ದಿರಾದ ಜಯಂತಿ, ನಯನಾ, ಜಯಲಕ್ಷ್ಮಿ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.

RELATED NEWS

You cannot copy contents of this page