ನಿವೃತ್ತ ಅಧ್ಯಾಪಕ ನಿಧನ
ಬದಿಯಡ್ಕ: ಇಲ್ಲಿನ ಮೂಕಂಪಾರೆ ನಿವಾಸಿ ನಿವೃತ್ತ ಅಧ್ಯಾಪಕ ಗೋಪಾಲನ್ ಮಾಯಿಪ್ಪಾಡಿ (84) ನಿಧನ ಹೊಂ ದಿದರು. ಕುಂಬಳೆ ಉಪಜಿಲ್ಲೆಯ ವಿವಿಧ ಶಾಲೆಗಳಲ್ಲಿ ಸೇವೆಗೈದು ಕುಂಟಿಕಾನ ಎಎಸ್ಬಿಎಸ್ನಿಂದ ನಿವೃತ್ತಿ ಹೊಂದಿದ್ದರು. ಸಾಮಾಜಿಕ, ಸಾಂಸ್ಕೃತಿಕ ರಂಗಗಳಲ್ಲಿ ಸಕ್ರಿಯ ರಾಗಿದ್ದರು. ಇವರ ಪತ್ನಿ ವಡಕ್ಕೇ ವೀಟಿಲ್ ಕಲ್ಯಾಣಿ ಈ ಹಿಂದೆ ನಿಧನರಾ ಗಿದ್ದಾರೆ. ಮೃತರು ಮಕ್ಕಳಾದ ಡಾ. ಸುನಿಲ್ ಜಿ.ಎಂ, ಅನಿಲ್ ಜಿ.ಎಂ, ಸೊಸೆಯಂದಿರಾದ ಮೀರಾ ಎನ್, ಕವಿತ ಅನಿಲ್ ಮಾಯಿಪ್ಪಾಡಿ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.