ನಿವೃತ್ತ ಜಸ್ಟೀಸ್ ಎಂ. ಫಾತಿಮಾಬೀವಿ ನಿಧನ
ಪತ್ತನಂತಿಟ್ಟ: ಸುಪ್ರೀಂಕೋರ್ಟ್‌ನ ಪ್ರಥಮ ಮಹಿಳಾ ನ್ಯಾಯಾಧೀಶೆಯೂ, ತಮಿಳುನಾಡಿನ ಮಾಜಿ ರಾಜ್ಯಪಾಲರಾದ ನಿವೃತ್ತ ಜಸ್ಟೀಸ್ ಎಂ. ಫಾತಿಮಾಬೀವಿ (೯೬) ನಿಧನಹೊಂದಿದರು. ವಯೋಸಹಜ ಅಸೌಖ್ಯದಿಂದ ಕೊಲ್ಲಂನ ಆಸ್ಪತ್ರೆಯಲ್ಲಿ ನಿನ್ನೆ ನಿಧನ ಸಂಭವಿಸಿದೆ.
ಇವರು ೧೯೮೯ರಿಂದ ೧೯೯೨ರ ವರೆಗೆ ಸುಪ್ರೀಂಕೋರ್ಟ್‌ನ ಜಡ್ಜ್ ಆಗಿದ್ದರು. ೧೯೯೭-೨೦೦೧ರ ಕಾಲಾ ವಧಿಯಲ್ಲ್ಲಿ ತಮಿಳುನಾಡಿನ ರಾಜ್ಯಪಾಲ ರಾಗಿಯೂ ಸೇವೆ ಸಲ್ಲಿಸಿದ್ದರು. ೧೯೫೦ರಲ್ಲಿ ನ್ಯಾಯವಾದಿ ಯಾಗಿ ಸೇವೆ ಆರಂಭಿಸಿದ ಫಾತಿಮಾ ಬೀವಿ ೧೯೫೮ರಲ್ಲಿ ಮುನ್ಸಿಫ್, ೧೯೮೦ರಲ್ಲಿ ಇನ್‌ಕಂ ಟ್ಯಾಕ್ಸ್ ಅಪ್ಪಲೇಟ್ ಟ್ರಿಬ್ಯೂನಲ್ ಜ್ಯುಡೀಶ್ಯಲ್ ಸದಸ್ಯೆ ಯಾಗಿದ್ದರು. ೧೯೮೩ರಲ್ಲಿ ಹೈಕೋ ರ್ಟ್‌ನ ನ್ಯಾಯಾಧೀಶೆಯಾಗಿ ನೇಮಕ ಗೊಂಡರು. ೧೯೮೯ರಲ್ಲಿ ನಿವೃತ್ತಿ ಬಳಿಕ ಸುಪ್ರೀಂಕೋರ್ಟ್‌ನ ಪ್ರಥಮ ಮಹಿಳಾ ನ್ಯಾಯಾಧೀಶೆಯಾಗಿ ಇವರನ್ನು ನೇಮಿಸಲಾಗಿತ್ತು. ಇವರು ಇಡೀ ಜಗತ್ತಿನಲ್ಲೇ ಈ ಹುದ್ದೆಗೇರಿದ ಮೊದಲ ಮುಸ್ಲಿಂ ಮಹಿಳೆಯಾಗಿದ್ದಾರೆ. ಕೇರಳ ಹಿಂದುಳಿದ ವಿಭಾಗ ಆಯೋ ಗದ ಪ್ರಥಮ ಅಧ್ಯಕ್ಷೆ, ರಾಷ್ಟ್ರೀಯ ಮಾನವಹಕ್ಕು ಆಯೋಗದ ಸದಸ್ಯೆಯಾ ಗಿಯೂ ಸೇವೆ ಸಲ್ಲಿಸಿದ್ದಾರೆ. ಪತ್ತನಂತಿಟ್ಟ, ಅಣ್ಣಾವೀಟಿಲ್ ಮೀರಾ ಸಾಹಿಬ್-ಖದೀಜಾಬೀವಿ ದಂಪತಿಯ ಪುತ್ರಿಯಾಗಿ ೧೯೨೭ ಎಪ್ರಿಲ್ ೩೦ರಂದು ಫಾತಿಮ ಬೀವಿ ಜನಿಸಿದ್ದರು.