ನೆಲ್ಲಿಕುಂಜೆ ಶ್ರೀ ಸುಬ್ರಹ್ಮಣ್ಯ ಕ್ಷೇತ್ರದಲ್ಲಿ ಷಷ್ಠಿ ಮಹೋತ್ಸವ ಆರಂಭ
ಕಾಸರಗೋಡು: ನೆಲ್ಲಿಕುಂಜೆ ಶ್ರೀ ಸುಬ್ರಹ್ಮಣ್ಯ ಕ್ಷೇತ್ರದಲ್ಲಿ ಷಷ್ಠಿ ಮಹೋತ್ಸವಕ್ಕೆ ಸಂಭ್ರಮದ ಚಾಲನೆ ನೀಡಲಾಯಿತು. ನಿನ್ನೆಯಿಂದ ಆರಂಭ ಗೊಂಡ ಕಾರ್ಯಕ್ರಮಗಳು ನಾಳೆವರೆಗೆ ನಡೆಯಲಿದೆ. ಕಾರ್ಯಕ್ರಮವನ್ನು ಕ್ಷೇತ್ರ ತಂತ್ರಿವರ್ಯ ಪರವೂರು ಶ್ರೀ ಉಣ್ಣಿಕೃಷ್ಣನ್ ಹಾಗೂ ಉತ್ಸವ ಸಮಿತಿ ಅಧ್ಯಕ್ಷ ಕೆ.ಎನ್. ವೆಂಕಟ್ರಮಣ ಹೊಳ್ಳ ದೀಪ ಬೆಳಗಿಸಿ ಉದ್ಘಾಟಿಸಿದರು. ಕ್ಷೇತ್ರದ ಪ್ರಧಾನ ಅರ್ಚಕ ಅನೀಶ್, ಅಧ್ಯಕ್ಷ ಎನ್. ಸತೀಶನ್, ಕಾರ್ಯದರ್ಶಿ ಮಹೇಶ್ ನೆಲ್ಲಿಕುಂಜೆ, ಕೋಶಾಧಿಕಾರಿ ಕೆ. ಉಮೇಶ್, ನಿರ್ಮಲ, ಉಪೇಂದ್ರ, ಅರವಿಂದ, ರಮೇಶ್, ಬಾಬು, ಸುಕೀರ್ತಿ, ಗೋವಿಂದ ಮಾರಾರ್ ಹಾಗೂ ಸಮಿತಿ ಸದಸ್ಯರು ಉಪಸ್ಥಿತರಿದ್ದರು.