ನೇಣು ಬಿಗಿದು ಯುವಕ ಮೃತ್ಯು
ಕಾಸರಗೋಡು: ಯುವಕ ಮನೆಯ ಸಿಟೌಟ್‌ನಲ್ಲಿ ನೇಣು ಬಿಗಿದು ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಮಾವುಂಗಾಲ್ ಕಾಟುಪ್ಪುಳಂಗರ ನಿವಾಸಿ ಬಾಲಚಂದ್ರನ್- ಶ್ರೀಜ ದಂಪತಿ ಪುತ್ರ ಶ್ರೀಜೇಶ್ (28) ಮೃತಪಟ್ಟ ಯುವಕ. ಇಂದು ಬೆಳಿಗ್ಗೆ ಮೃತದೇಹ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ. ಕೂಡಲೇ ಆಸ್ಪತ್ರೆಗೆ ಸಾಗಿಸಲಾಯಿತು. ಮೃತದೇಹವನ್ನು ಶವಾಗಾರದಲ್ಲಿರಿಸಲಾಗಿದೆ. ಹೊಸದುರ್ಗ ಪೊಲೀಸರು ಕೇಸು ದಾಖಲಿಸಿದ್ದಾರೆ.
ಮೃತ ಯುವಕ ತಂದೆ, ತಾಯಿ, ಸಹೋದರ ವಿಜೇಶ್ ಹಾಗೂ ಅಪಾರ ಬಂಧು- ಮಿತ್ರರನ್ನು ಅಗಲಿದ್ದಾರೆ. ಆತ್ಮಹತ್ಯೆಗೆ ನಿಖರ ಕಾರಣ ತಿಳಿದು ಬಂದಿಲ್ಲ.