ನೇತಾಜಿ ಸ್ಟಾಂಡ್ ಕಾರ್ಮಿಕರ ಕುಟುಂಬ ಸಂಗಮ
ಕಾಸರಗೋಡು: ಬಿಎಂಎಸ್‌ನ 70ನೇ ವಾರ್ಷಿಕದಂಗವಾಗಿ ಕಾಸರಗೋಡು ವಲಯದ ಹೊಸ ಬಸ್ ನಿಲ್ದಾಣ ನೇತಾಜಿ ಸ್ಟಾಂಡ್‌ನ ಕಾರ್ಮಿಕರ ಕುಟುಂಬ ಸಂಗಮ ಜರಗಿತು. ಇದೇ ವೇಳೆ ಹಿರಿಯ ಕಾರ್ಯಕರ್ತರನ್ನು ಗೌರವಿಸಲಾ ಯಿತು. ಎಸ್.ಕೆ. ಉಮೇಶ್ ಅಧ್ಯಕ್ಷತೆ ವಹಿಸಿದ್ದು, ಜಿಲ್ಲಾ ಕಾರ್ಯ ದರ್ಶಿ ಕೆ.ವಿ. ಬಾಬು ಉದ್ಘಾಟಿಸಿದರು. ಬಿಎಂಎಸ್ ಜಿಲ್ಲಾ ಸಮಿತಿ ಸದಸ್ಯ ಎ. ಕೇಶವ, ವಲಯ ಕಾರ್ಯದರ್ಶಿ ರಿಜೇಶ್ ಜೆ.ಪಿನಗರ, ಶಿವಪ್ರಸಾದ್ ತಾಳಿಪಡ್ಪು ಮಾತನಾ ಡಿದರು. ಎಸ್‌ಎಸ್‌ಎಲ್‌ಸಿಯಲ್ಲಿ ಉನ್ನತ ಅಂಕ ಪಡೆದ ಮಕ್ಕಳನ್ನು ಅಭಿನಂದಿ ಸಲಾಯಿತು. ಘಟಕ ಅಧ್ಯಕ್ಷ ಪ್ರಸಾದ್, ಕಾರ್ಯದರ್ಶಿ ರವಿರಾಜ್ ನೇತೃತ್ವ ನೀಡಿದರು. ಸಾಂಸ್ಕೃತಿಕ ಕಾರ್ಯಕ್ರಮಗಳು ಜರಗಿತು.