ಪಂಜತೊಟ್ಟಿ ಶ್ರೀ ವಿಘ್ನೇಶ್ವರ ಭಜನಾ ಮಂದಿರ ಕಟ್ಟಡ ಉದ್ಘಾಟನೆ: ಆಮಂತ್ರಣ ಪತ್ರಿಕೆ ಬಿಡುಗಡೆ
ಇಚ್ಲಂಗೋಡು: ಪಂಜತೊಟ್ಟಿ ಶ್ರೀ ವಿಘ್ನೇಶ್ವರ ಭಜನಾ ಮಂದಿರದ ನೂತನ ಕಟ್ಟಡ ಉದ್ಘಾಟನೆ ಹಾಗೂ ನೂತನ ಶ್ರೀ ವಿಘ್ನೇಶ್ವರ ದೇವರ ಛಾಯಾ ಫಲಕ ಪ್ರತಿಷ್ಠೆ ಮತ್ತು ಸಾನಿಧ್ಯ ಕಲಶೋತ್ಸವ ಡಿಸೆಂಬರ್ 24 ಹಾಗೂ 25ರಂದು ಜರಗಲಿದೆ. ಕಾರ್ಯಕ್ರಮದ ಆಮಂತ್ರಣ ಪತ್ರಿಕೆಯನ್ನು ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ ವೀರೇಂದ್ರ ಹೆಗ್ಗಡೆ ಮಂದಿರದ ಪದಾಧಿಕಾರಿಗಳ ಸಮ್ಮುಖದಲ್ಲಿ ಬಿಡುಗಡೆಗೊಳಿಸಿದರು.