ಪತ್ನಿ ಮನೆಗೆ ಬಂದಿದ್ದ ಯುವಕ ನೇಣು ಬಿಗಿದು ಸಾವಿಗೀಡಾದ ಸ್ಥಿತಿಯಲ್ಲಿ ಪತ್ತೆ
ಕುಂಬಳೆ: ಒಂದು ವಾರ ಹಿಂದೆ ಪತ್ನಿ ಮನೆಗೆ ಬಂದಿದ್ದ ಯುವಕ ಬಾತ್‌ರೂಂನಲ್ಲಿ ನೇಣು ಬಿಗಿದು ಸಾವಿಗೀಡಾದ ಸ್ಥಿತಿಯಲ್ಲಿ ಪತ್ತೆಯಾಗಿ ದ್ದಾರೆ. ಕರಿವೆಳ್ಳೂರು ಕೊಡಕ್ಕಾಡ್ ಓಲಾಟ್‌ನ ರವಿ-ಕಮಲ ದಂಪತಿಯ ಪುತ್ರ ಎಂ. ವಿಜೇಶ್ (35) ಮೃತಪಟ್ಟ ವ್ಯಕ್ತಿ. ಕುಂಬಳೆ ಸೂರಂಬೈಲಿನಲ್ಲಿರುವ ಪತ್ನಿ ಮನೆಗೆ ಒಂದು ವಾರ ಹಿಂದೆಯಷ್ಟೇ ವಿಜೇಶ್ ಪತ್ನಿ ಹಾಗೂ ಮಕ್ಕಳೊಂದಿಗೆ ಆಗಮಿಸಿದ್ದರು. ನಿನ್ನೆ ಮಧ್ಯಾಹ್ನ ವೇಳೆ ವಿಜೇಶ್ ಬಾತ್‌ರೂಂಗೆ ತೆರಳಿದ್ದರು. ದೀರ್ಘ ಹೊತ್ತಾದರೂ ಮರಳಿ ಬಾರದ ಹಿನ್ನೆಲೆಯಲ್ಲಿ ನೋಡಿದಾಗ ನೇಣು ಬಿಗಿದು ಸಾವಿಗೀಡಾದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಮೃತದೇಹವನ್ನು ಕಾಸರಗೋಡು ಜನರಲ್ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಿದ ಬಳಿಕ ಊರಿಗೆ ಕೊಂಡೊಯ್ದು ಅಂತ್ಯ ಸಂಸ್ಕಾರ ನಡೆಸಲಾಯಿತು. ವಿಜೇಶ್‌ರ ಸಾವಿನ ಬಗ್ಗೆ ಕುಂಬಳೆ ಪೊಲೀಸರು ಕೇಸು ದಾಖಲಿಸಿಕೊಂಡಿದ್ದಾರೆ. ಮೃತರು ಪತ್ನಿ ದೀಪಿಕ, ಮಕ್ಕಳಾದ ಋತ್ವಿನ್, ಋತಿಕ್, ಸಹೋದರಿ ಉಷಾ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.