ಪೇಟೆಗೆ ತೆರಳಿದ ವ್ಯಕ್ತಿ ಸಮುದ್ರ ತೀರದಲ್ಲಿ ಮೃತಪಟ್ಟ ಸ್ಥಿತಿಯಲ್ಲಿ ಪತ್ತೆ

ಉಪ್ಪಳ: ಮನೆಯಿಂದ ಸಮೀ ಪದ ಪೇಟೆಗೆಂದು ತಿಳಿಸಿ ಹೋದ ವ್ಯಕ್ತಿ ಸಮುದ್ರ ತೀರದಲ್ಲಿ ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಕುಂಜತ್ತೂರು ಸಣ್ಣಡ್ಕ ನಿವಾಸಿ ಶೇಖರ (60) ಎಂಬವರು ಮೃತಪಟ್ಟ ವ್ಯಕ್ತಿ. ನಿನ್ನೆ ಸಂಜೆ 4 ಗಂಟೆಗೆ ಇವರು ಕುಂಜತ್ತೂರಿನ ಪೇಟೆಗೆಂದು ತಿಳಿಸಿ ಹೋಗಿದ್ದರು.  ಅನಂತರ ಮರಳಿ ಬಂದಿರಲಿಲ್ಲ. 5.30ರ ವೇಳೆ ಇವರು ಕುಂಡುಕೊಳಕೆ ಸಮುದ್ರ ತೀರದಲ್ಲಿ ಮೃತಪಟ್ಟ ಸ್ಥಿತಿಯಲ್ಲಿ ಕಂಡುಬಂದಿ ದ್ದಾರೆ. ವಿಷಯ ತಿಳಿದು ಮನೆಯವರು ಹಾಗೂ ಶಿರಿಯ ಕರಾವಳಿ ಪೊಲೀ ಸರು ಸ್ಥಳಕ್ಕೆ ತೆರಳಿ ಮೃತದೇಹವನ್ನು ಮಂಗಲ್ಪಾಡಿ ಸರಕಾರಿ ಆಸ್ಪತ್ರೆಗೆ ತಲುಪಿಸಲಾಯಿತು. ಮೃತರು ಪತ್ನಿ ರಾಧಾ, ಮಕ್ಕಳಾದ ಸುಜಿತ್, ಸುಕೇಶ್, ಸುನಿಲ್ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.

RELATED NEWS

You cannot copy contents of this page