ಪೊಸೋಟು ಮುಹಿಯುದ್ದೀನ್ ಜುಮಾ ಮಸೀದಿ ಆಡಳಿತ ಸಮಿತಿಯಲ್ಲಿ ಆರ್ಥಿಕ ಅವ್ಯವಹಾರ ತನಿಖೆಗೆ ಅಧಿಕಾರಿಯ ನೇಮಕ
ಕುಂಬಳೆ: ಜಿಲ್ಲೆಯ ಹಳೆಯ ಮಸೀ ದಿಯಾದ ಪೊಸೋಟು ಮುಹಿಯು ದ್ದೀನ್ ಜುಮಾ ಮಸೀದಿ ಆಡಳಿತ ಸಮಿ ತಿಯಲ್ಲಿ ಭಾರೀ ಆರ್ಥಿಕ ಅವ್ಯವಹಾರ ನಡೆದಿದೆ ಯೆಂದು ದೂರಲಾಗಿದೆ. ಮಹಲ್ ನಿವಾಸಿಗಳಾದ ಅಬ್ದುಲ್ ರವೂಫ್, ಮೊಯ್ದೀನ್ ಕುಂಞಿ ಎಂಬಿವರ ನೇತೃತ್ವದಲ್ಲಿ ಕೇರಳ ರಾಜ್ಯ ವಖಫ್ ಬೋರ್ಡ್ಗೆ ದೂರು ನೀಡಲಾಗಿದೆ. ಅಧ್ಯಕ್ಷ ಅಬ್ದುಲ್ಲ ಎಂಬ ವ್ಯಕ್ತಿ ಆರ್.ಕೆ. ಬಾವ ಹಾಜಿ ನೇತೃತ್ವದಲ್ಲಿ ರುವ ಆಳಿತ ಸಮಿತಿ ವಿರುದ್ಧ ಆರ್ಥಿಕ ಅವ್ಯವಹಾರ ಆರೋಪಿಸಲಾಗಿದೆ. ೨೦೧೩ರಿಂದ ಸತತವಾಗಿ ಅಬ್ದುಲ್ಲ ಆರ್.ಕೆ. ಬಾವ ಹಾಜಿಯ ನೇತೃತ್ವದಲ್ಲಿ ರುವ ಸಮಿತಿ ಆಡಳಿತ ನಡೆಸುತ್ತಿದೆ. ೨೦೧೮ರಲ್ಲಿ ಮಹಲ್ನ ಮಹಾಸಭೆ ಸದಸ್ಯರಿಗೆ ಸೂಚನೆ ನೀಡದೆ ಮಹಾಸಭೆ ಎಂಬ ಹೆಸರಲ್ಲಿ ಬಾವ ಹಾಜಿಯ ನೇತೃತ್ವದಲ್ಲಿ ೨೭ ಮಂದಿ ಸೇರಿದ ಸಂಘದ ಹೆಸರು ಓದಿ ಘೋಷಿಸಲಾಯಿ ತಾದರೂ ಪ್ರಜಾಪ್ರಭುತ್ವ ರೀತಿಯಲ್ಲಿನ ಸಭೆ ನಡೆಸದೆ ಘೋಷಿಸಲಾಗಿದೆ ಎಂಬ ಆರೋಪವೂ ದೂರಿನಲ್ಲಿ ಸೂಚಿಸ ಲಾಗಿದೆ. ಆರ್ಥಿಕ ಆಡಿಟರ್ ಇಲ್ಲದೆ ನಡೆಸಿದ ಸಭೆಯ ಬಗ್ಗೆ ಮಹಲ್ ನಲ್ಲಿ ವಿವಾದ ಉಂಟಾಗಿದೆ.
ನವೀಕರಿಸಿದ ಮಸೀದಿಯ ಲೆಕ್ಕ ದಲ್ಲೂ ಅವ್ಯವಹಾರ ಪತ್ತೆಯಾಗುವುದ ರೊಂದಿಗೆ ಮಹಲ್ ನಿವಾಸಿಗಳು ವಖಫ್ ಬೋರ್ಡ್ನ್ನು ಸಮೀಪಿಸಿ ದ್ದಾರೆ. ೩.೨೦ ಕೋಟಿ ರೂ. ಮಸೀದಿ ನಿರ್ಮಾಣಕ್ಕಾಗಿ ಸಂಗ್ರಹಿಸಲಾಯಿತಾ ದರೂ ೧.೩೦ ಕೋಟಿ ರೂಪಾಯಿಯ ವೆಚ್ಚ? ಮಾತ್ರವೇ ಲೆಕ್ಕ ಹಾಕಿರುವುದು ಮುಂಬೈ ಬಾದ್ರಾದಲ್ಲಿ ಮಸೀದಿಯ ಆದಾಯಕ್ಕಾಗಿ ನಿರ್ಮಿಸಿರುವ ಕೋಟ್ಯಂತರ ರೂ. ಮೌಲ್ಯದ ಫ್ಲಾಟ್ ಮಾರಾಟ ಮಾಡಿರುವುದರಲ್ಲಿ ೯೦ ಲಕ್ಷ ರೂ.ವನ್ನು ಲಭಿಸಿದ ಹಣವಾಗಿ ದಾಖಲಿಸಲಾಗಿದೆಯೆಂದು ದೂರಿನಲ್ಲಿ ಸೂಚಿಸಲಾಗಿದೆ. ಮದ್ರಸ ನಿರ್ಮಾಣ ಲೆಕ್ಕ, ೨೦೧೫ರಿಂದ ೨೦೨೩ರ ವರೆಗಿರುವ ಆದಾಯ-ವೆಚ್ಚ ಲೆಕ್ಕಾಚಾರಗಳು ಎಂಬಿವುಗಳನ್ನು ಪರಿಶೀಲಿಸಬೇಕೆಂದು ಆಗಹಿಸಿ ವಖಫ್ ಬೋರ್ಡ್ಗೆ ಮಹಲ್ ನಿವಾಸಿಗಳು ದೂರು ನೀಡಿ ರುವುದು. ಜಮಾಯತ್ ಕಾರ್ಯದರ್ಶಿ ಉಸ್ಮಾನ್ ಹಾಜಿ, ಅಧ್ಯಕ್ಷ ಎಂ.ಎ ಅಬ್ದುಲ್ ಯಾನೆ ಆರ್.ಕೆ. ಬಾವ ಹಾಜಿ, ಕೋಶಾಧಿಕಾರಿ ಕೆ.ಟಿ. ಅಬ್ದುಲ್ಲ ಹಾಜಿ ಎಂಬಿವರ ವಿರುದ್ಧ ದೂರು ನೀಡ ಲಾಗಿದೆ. ಈ ಪ್ರಕರಣದಲ್ಲಿ ವಖಫ್ ಸೊತ್ತುಗಳನ್ನು ಪರಿಶೀಲಿಸಲು ವಖಫ್ ಇನ್ಸ್ಪೆಕ್ಟರರನ್ನು, ಲೆಕ್ಕಪರಿಶೀಲಿಸಲು ಆಡಿಟರನ್ನು ನೇಮಕಗೊಳಿಸಿ ವಖಫ್ ಬೋರ್ಡ್ ೨೦೨೩ ಜೂನ್ನಲ್ಲಿ ಆದೇಶ ಹೊರಡಿಸಿದೆ. ತನಿಖಾ ಧಿಕಾರಿಗಳು ಸಲ್ಲಿಸಿದ ವರದಿಯಲ್ಲಿ ವಖಫ್ ಬೋರ್ಡ್ನ ಪೂರ್ವ ಅನುಮತಿ ಇಲ್ಲದೆ ವಖಫ್ ಸೊತ್ತುಗಳನ್ನು ಮಾರಾಟ ಮಾಡಿರುವುದು ಪರಿಶೀಲನೆಯಲ್ಲಿ ಭಾರೀ ಆರ್ಥಿಕ ಲೋಪದೋಷ ಪತ್ತೆಹಚ್ಚಿರುವುದರ ಹಿನ್ನೆಲೆಯಲ್ಲಿ ಹೆಚ್ಚುವರಿ ಪರಿಶೀಲನೆಗಾಗಿ ಚೀಫ್ ಎಕ್ಸಿಕ್ಯೂಟಿವ್ ಆಫೀಸರ್ರಿಗೆ ಈ ತಿಂಗಳ ೧೦ರಿಂದ ಹೊಣೆ ವಹಿಸಿಕೊಡಲಾಗಿದೆ.