ಪ್ರತಾಪನಗರದಲ್ಲಿ ರಸ್ತೆಗಳ ಅಭಿವೃದ್ಧಿ ಕಾಮಗಾರಿ
ಮಂಗಲ್ಪಾಡಿ: ಮಂಗಲ್ಪಾಡಿ ಪಂ. ಪ್ರತಾಪನಗರದ 7ನೇ ವಾರ್ಡ್ನಲ್ಲಿ ಚರಂಡಿ, ರಸ್ತೆಗಳ ಅಭಿವೃದ್ದಿ ಕಾಮಗಾರಿ ಭರದಿಂದ ಸಾಗುತ್ತಿದೆ. ಪ್ರತಾಪನಗರ ಪುಳಿಕುತ್ತಿ ಮೊಗೇರ ದೈವಸ್ಥಾನ ರಸ್ತೆಯಲ್ಲಿ 322 ಮೀಟರ್ ರಸ್ತೆಗೆ ಸುಮಾರು 5ಲಕ್ಷ ರೂ ವೆಚ್ಚದಲ್ಲಿ ಮರು ಡಾಮರೀಕರಣ, ಬೀಟಿಗದ್ದೆ-ತಿಂಬರದ ಬಯಲು ರಸ್ತೆಯಲ್ಲಿ 96 ಮೀಟರ್ ಕಾಂಕ್ರೀಟ್ ಕಾಮಗಾರಿ ಪೂರ್ತಿ ಗೊಂಡಿದೆ. ಅಲ್ಲದೆ ಗುಳಿಗ ಬನದ ಬಳಿಯ ರಸ್ತೆಯಲ್ಲಿ ಚರಂಡಿ ಕಾಮಗಾರಿ ನಡೆಯುತ್ತಿದೆ. ಪ್ರತಾಪ ನಗರದಲ್ಲಿ ರಸ್ತೆ ಶೋಚನೀಯ ವಸ್ಥೆಯಿಂದ ಸಂಚಾರಕ್ಕೆ ಸಮಸ್ಯೆ ಯÁಗಿತ್ತು. ಪಂ. ಸದಸ್ಯೆ ಸುಧಾ ಗಣೇಶ್ ಮುತುವರ್ಜಿ ವಹಿಸಿ, ರಸ್ತೆ ದುರಸ್ತಿ ಗೊಳಿಸಿದ್ದಾರೆ. ಸುಧಾಗಣೇಶ್ರಿ ಗೆ ಊರವರು ಅಭಿನಂದನೆ ಸಲ್ಲಿಸಿದ್ದಾರೆ.