13.394 ಗ್ರಾಂ ಮಾದಕವಸ್ತು ವಶ: ಕರ್ನಾಟಕ ನಿವಾಸಿ ಸೆರೆ

ಮಂಜೇಶ್ವರ: ಮಂಜೇಶ್ವರ ರೈಲು ನಿಲ್ದಾಣ ರಸ್ತೆ ಬಳಿ ಕಾಸರಗೋಡು ಎಕ್ಸೈಸ್ ಎನ್‌ಫೋರ್ಸ್‌ಮೆಂಟ್ ಆಂಡ್ ನರ್ಕೋಟಿಕ್ಸ್ ಸ್ಕ್ವಾಡ್‌ನ ಎಕ್ಸೈಸ್ ಇನ್ಸ್‌ಪೆಕ್ಟರ್ ಜೋಸೆಫ್ ಜೆ.ರ ನೇತೃತ್ವದ ಅಬಕಾರಿ ತಂಡ ನಿನ್ನೆ ನಡೆಸಿದ ಕ್ಷಿಪ್ರ ಕಾರ್ಯಾಚರಣೆಯಲ್ಲಿ ಮಾದಕ ವಸ್ತುವಾದ 13.394 ಗ್ರಾಂ ಮೆಥಾಫಿಟಮಿನ್ ಪತ್ತೆಹಚ್ಚಿ ವಶಪಡಿಸಿಕೊಂಡಿದೆ. ಇದಕ್ಕೆ ಸಂಬಂಧಿಸಿ ಮಂಗಳೂರು ತಾಲೂಕಿನ ಕೆ.ಸಿ. ರೋಡ್ ಪಿಲಿಕ್ಕೂರ್ ನಿವಾಸಿ ಹಾಗೂ ಹಾಗೂ ಮಂಜೇಶ್ವರ ರೈಲು ನಿಲ್ದಾಣ ಪರಿಸರದ ಬಾಡಿಗೆ ಕ್ವಾರ್ಟರ್ಸ್‌ನಲ್ಲಿ ವಾಸಿಸುತ್ತಿರುವ ಇಸ್ಮಾಯಿಲ್ ಬಿ.ಎಂ. (37) ಎಂಬಾತನನ್ನು ಬಂಧಿಸಿ ಎನ್‌ಡಿಪಿಎಸ್ ಕಾನೂನಿನ ಪ್ರಕಾರ ಕೇಸು ದಾಖಲಿಸಲಾಗಿದೆ.

ಈ ಕಾರ್ಯಾಚರಣೆ ನಡೆಸಿದ ಅಬಕಾರಿ ತಂಡದಲ್ಲಿ ಅಸಿಸ್ಟೆಂಟ್ ಎಕ್ಸೈಸ್ ಇನ್ಸ್‌ಪೆಕ್ಟರ್ (ಗ್ರೇಡ್) ಸಿ.ಕೆ. ವಿ. ಸುರೇಶ್, ಪ್ರಿವೆಂಟಿವ್ ಆಫೀಸರ್ (ಗ್ರೇಡ್) ಪ್ರಜಿತ್ ಕೆ.ಆರ್, ಸಿವಿಲ್ ಎಕ್ಸೈಸ್ ಆಫೀಸರ್‌ಗಳಾದ ಶಿಜಿತ್ ವಿ.ವಿ., ಗಣೇಶನ್ ಕೆ, ಜೋಬಿ ಕೆ.ಪಿ, ಎಕ್ಸೈಸ್ ಕೆಮು ಘಟಕದ ಪ್ರಿವೆಂಟೀವ್ ಆಫೀಸರ್‌ಗಳಾದ ಎ.ಬಿ. ಅಬ್ದುಲ್ಲ, ಜಿಜಿನ್ ಎಂ.ವಿ, ಸಿವಿಲ್ ಎಕ್ಸೈಸ್ ಆಫೀಸರ್ ಸುಬಿನ್ ಫಿಲಿಪ್ ಎಂಬವರು ಒಳಗೊಂಡಿದ್ದರು.

RELATED NEWS

You cannot copy contents of this page