ಪ್ರತಾಪನಗರ ಶಿವಶಕ್ತಿ ಫ್ರೆಂಡ್ಸ್ ಕ್ಲಬ್ ವಾರ್ಷಿಕೋತ್ಸವ
ಮಂಗಲ್ಪಾಡಿ: ಪ್ರತಾಪನಗರ ಶಿವಶಕ್ತಿ ಫ್ರೆಂಡ್ಸ್ ಕ್ಲಬ್ ಇದರ ೩೨ನೇ ವಾರ್ಷಿಕೋತ್ಸವ ಹಾಗೂ ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜೆ ನಡೆಯಿತು. ಹಿರಿಯರಾದ ಶೇಖರ ಪೂಜಾರಿ ಮಂಗಲ್ಪಾಡಿ ಅಧ್ಯಕ್ಷತೆ ವಹಿಸಿದರು. ಪ್ರೊಫೆಸರ್ ಡಾ. ಮನು ಭಟ್ ಕೆದುಕೋಡಿ, ಮಂಜೇಶ್ವರ ಬ್ಲೋಕ್ ಪಂಚಾಯತ್ ಸದಸ್ಯೆ ಅಶ್ವಿನಿ ಎಂ.ಎಲ್, ಮಂಗಲ್ಪಾಡಿ ಪಂಚಾಯತ್ ಸದಸ್ಯೆ ಸುಧಾ ಗಣೇಶ್, ಕ್ಲಬ್ ಅಧ್ಯಕ್ಷ ಗಣೇಶ್ ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ ರ‍್ಯಾಂಕ್ ವಿಜೇತೆ ವೃದ್ಧಿ ಶೆಟ್ಟಿ ತಿಂಬರ, ಪ್ರಶಸ್ತಿ ವಿಜೇತ ಕಂಬಳ ಓಟಗಾರ ರಕ್ಷಿತ್ ಶೆಟ್ಟಿ ಪರಪು ಮಂಗಲ್ಪಾಡಿ, ಮೈಕ್ರೋ ಆರ್ಟ್ಸ್ ಕಲಾವಿದ ವೆಂಕಟೇಶ್ ಆಚಾರ್ಯ ಇಚ್ಲಂಗೋಡು ಇವರನ್ನು ಸನ್ಮಾನಿಸಲಾಯಿತು. ಸೋಮನಾಥ ಶೆಟ್ಟಿ ಮಂಗಲ್ಪಾಡಿ ಸ್ವಾಗತಿಸಿ, ಸುರೇಶ್ ಜಿ. ವಂದಿಸಿದರು. ಮಂಜು ಜೋಡುಕಲ್ಲು ನಿರೂಪಿಸಿದರು. ಸಾಂಸ್ಕೃತಿಕ ಕಾರ್ಯಕ್ರಮದಂಗವಾಗಿ ಅಮ್ಮ ಕಲಾವಿದೆರ್ ಕುಡ್ಲ ಅಭಿನಯಿಸುವ ‘ಅಮ್ಮೆರ್’ ತುಳು ನಾಟಕ ಪ್ರದರ್ಶನಗೊಂಡಿತು.