ಪ್ಲಸ್ವನ್: ಜಿಲ್ಲೆಯಲ್ಲಿ ಈ ತನಕ ಪ್ರವೇಶ ಪಡೆದಿದ್ದು 16,216 ಮಂದಿ
ಕಾಸರಗೋಡು: ಜಿಲ್ಲೆಯಲ್ಲಿ ವಿವಿಧ ಕ್ವಾಟಾಗಳಲ್ಲಾಗಿ ಈ ತನಕ ಒಟ್ಟು 16,216 ಮಂದಿ ವಿದ್ಯಾರ್ಥಿಗಳು ಪ್ಲಸ್ವನ್ಗೆ ಪ್ರವೇಶ ಪಡೆದಿದ್ದಾರೆ.
ಜಿಲ್ಲೆಯಲ್ಲಿ 995 ಪ್ಲಸ್ವನ್ ಸೀಟುಗಳು ಇನ್ನೂ ಖಾಲಿ ಬಿದ್ದಿವೆ. ಇದರ ಹೊರತಾಗಿ ಜಿಲ್ಲೆಗೆ ಹೊಸದಾಗಿ 18 ಪ್ಲಸ್ವನ್ ಬ್ಯಾಚ್ಗಳನ್ನು ಮಂಜೂರು ಮಾಡಲಾಗಿದ್ದು ಅದರಂತೆ ಇದು 1080 ಸೀಟುಗಳು, ಮೆರಿಟ್ನಲ್ಲಿ ಮಾತ್ರವಾಗಿ 2075 ಸೀಟುಗಳು ಹಾಗೂ ಅನನುದಾನಿತ ಶಾಲೆಗಳಲ್ಲಾಗಿ 1354 ಸೀಟುಗಳು ಈಗ ತೆರವು ಬಿದ್ದಿವೆ.
ಹೀಗೆ ಅನಾನುದಾನಿತ ಶಾಲೆಗಳು ಸೇರಿದಂತೆ ಜಿಲ್ಲೆಯಲ್ಲಿ ಒಟ್ಟಾರೆಯಾಗಿ ಈಗ 3429 ಸೀಟುಗಳು ಖಾಲಿ ಬಿದ್ದಿವೆ.
ಈ ಶೈಕ್ಷಣಿಕ ವರ್ಷದಲ್ಲಿ ಜಿಲ್ಲೆಯ ಅನನುದಾನಿತ ಶಾಲೆಗಳ ಪ್ಲಸ್ವನ್ ತರಗತಿಗಳಿಗೆ ಕೇವಲ 646 ಮಂದಿ ವಿದ್ಯಾರ್ಥಿಗಳು ಮಾತ್ರವೇ ಸೇರ್ಪಡೆ ಗೊಂಡಿದ್ದಾರೆ. ಈ ಬಾರಿ ಪ್ಲಸ್ವನ್ಗೆ ಪ್ರವೇಶ ಪಡೆದ 16216 ಮಂದಿಯಲ್ಲಿ ಕ್ರೀಡಾ ವಿಭಾಗದಲ್ಲಿ 173, ಎಂ.ಆರ್.ಎಸ್. ವಿಭಾಗದಲ್ಲಿ 90, ಕಮ್ಯೂನಿಟಿ ವಿಭಾಗದಲ್ಲಿ 349, ಮೆನೇಜ್ಮೆಂಟ್ ವಿಭಾಗದಲ್ಲಿ 866 ಹಾಗೂ ಅನ್ ಐಡೆಡ್ನ 646 ಮಂದಿ ಒಳಗೊಂಡಿದ್ದಾರೆ. ಪ್ಲಸ್ವನ್ ಪ್ರವೇಶ ಕ್ಕಾಗಿ ಅರ್ಜಿ ಸಲ್ಲಿಸಿದ ಎಲ್ಲಾ ವಿದ್ಯಾರ್ಥಿ ಗಳಿಗೂ ಪ್ರವೇಶ ಲಭಿಸಿದರೂ, ಆ ಬಳಿಕವೂ ಜಿಲ್ಲೆಯಲ್ಲಿ 400ರಷ್ಟು ಪ್ಲಸ್ ವನ್ ಸೀಟುಗಳು ಖಾಲಿ ಬೀಳಲಿದೆ ಎಂದು ಸಂಬAಧಪಟ್ಟವರು ಹೇಳುತ್ತಿದ್ದಾರೆ.