ಫಾಸ್ಟ್ಫುಡ್ ಹೊಟೇಲ್ಗಳಲ್ಲಿ ತ್ಯಾಜ್ಯರಾಶಿ: 15,000 ರೂ. ದಂಡ
ಕಾಸರಗೋಡು: ನಗರದ ಪ್ರೆಸ್ಕ್ಲಬ್ ಜಂಕ್ಷನ್ನ ಪ್ರಧಾನ ರಸ್ತೆ ಪರಿಸರದಲ್ಲಿ ೧೦ರಷ್ಟು ಫಾಸ್ಟ್ಫುಡ್ ಹೊಟೇಲ್ಗಳಿಂದಿರುವ ಅವಶಿಷ್ಟಗಳನ್ನು ತ್ಯಾಜ್ಯ ಮೂಲದಲ್ಲೇ ಸಂಸ್ಕರಿಸದೆ ರಾಶಿ ಹಾಕಿರುವುದು ಹಾಗೂ ಇದರಿಂದ ಪರಿಸರದವರಿಗೆ ದುರ್ವಾಸನೆ ಉಂಟಾದ ಹಿನ್ನೆಲೆಯಲ್ಲಿ ಜಿಲ್ಲಾ ಎನ್ಫೋರ್ಸ್ಮೆಂಟ್ ತಂಡ ಮಾಲಕರಿಂದ 15,000 ರೂ. ದಂಡ ವಸೂಲಿ ಮಾಡಿದೆ. ತ್ಯಾಜ್ಯಗಳನ್ನು ಸಂಸ್ಕರಿಸುವುದಕ್ಕೆ ವೈಜ್ಞಾನಿಕವಾದ ವ್ಯವಸ್ಥೆಗಳನ್ನು ಸಿದ್ಧಪಡಿಸಲು ಪರಿಸರ ಶುಚಿಯಾಗಿರಿಸಲು ಮಾಲಕರಿಗೆ ನಿರ್ದೇಶ ನೀಡಿ, ಮುಂದಿನ ತಪಾಸಣೆಗೆ ಸಂಬಂಧಪಟ್ಟ ಆರೋಗ್ಯ ಇಲಾಖೆಗೆ ನಿರ್ದೇಶ ನೀಡಿದರು. ಇಲ್ಲೇ ಸಮೀಪದ ಕಾಂಪ್ಲೆಕ್ಸ್ನಲ್ಲಿ ತ್ಯಾಜ್ಯಗಳನ್ನು ಸುಟ್ಟು ನಾಶಪಡಿಸುತ್ತಿರುವ ಹಿನ್ನೆಲೆಯಲ್ಲಿ ಮಾಲಕರಿಂದ 5000 ರೂ. ದಂಡ ವಸೂಲು ಮಾಡಲಾಗಿದೆ. ರಸ್ತೆ ಬದಿಗಳಲ್ಲಿ ತ್ಯಾಜ್ಯವನ್ನು ಉಪೇಕ್ಷಿಸುವವರ ಪತ್ತೆಗಾಗಿ ತಂಡ ತನಿಖೆ ತೀವ್ರಗೊಳಿಸಿದೆ.