ಬಂಟ್ಸ್ ಪ್ರೀಮಿಯರ್ ಲೀಗ್ ಕ್ರೀಡಾಳುಗಳ ಹರಾಜು ಪ್ರಕ್ರಿಯೆ

ವರ್ಕಾಡಿ: ಬಂಟ ಸಮುದಾ ಯದವರಿಗೋಸ್ಕರ ಯುನೈಟೆಡ್ ಬಂಟ್ಸ್ ಕಾಸರಗೋಡು- ವರ್ಕಾಡಿ ದೀಪಾವಳಿಗೆ ಆಯೋಜಿಸುವ  ಎಂಟು ತಂಡಗಳ ಅಂಡರ್ ಆರ್ಮ್ ಕ್ರಿಕೆಟ್ ಪ್ರೀಮಿಯರ್ ಲೀಗ್‌ನ ಹರಾಜು ಪ್ರಕ್ರಿಯೆ ವರ್ಕಾಡಿ ಪಂಚಾಯತ್‌ನ ಸುಂಕದಕಟ್ಟೆ ವಿಶ್ವಪ್ರಭಾ ಸಭಾಂಗಣದಲ್ಲಿ ನಡೆಯಿತು.

ರಾಷ್ಟ್ರೀಯ ಕಬಡ್ಡಿ ಕ್ರೀಡಾಳು ಸುಕೇಶ್ ಭಂಡಾರಿ ಉದ್ಘಾಟಿಸಿದರು. ಯುನೈಟೆಡ್ ಬಂಟ್ಸ್ ಸ್ಥಾಪಕ ಅಧ್ಯಕ್ಷ  ಪೃಥ್ವಿರಾಜ್ ಶೆಟ್ಟಿ ಕುಂಬಳೆ ಅಧ್ಯಕ್ಷತೆ ವಹಿಸಿದರು. ರಾಜಕುಮಾರ ಶೆಟ್ಟಿ ಮೊಟ್ಲ, ಜಯರಾಜ ಶೆಟ್ಟಿ ಕಿಶೋರ್ ಶೆಟ್ಟಿ, ಯುನೈಟೆಡ್ ಬಂಟ್ಸ್ ಸಹ ಮಾಲಕ ಚಂದ್ರಹಾಸ ರೈ ಅಮೀನೆ ಮುಖ್ಯ ಅತಿಥಿಗಳಾಗಿದ್ದರು. ರೋಹಿತ್ ರೈ ವರ್ಕಾಡಿ ವಂದಿಸಿದರು. ರಾಕೇಶ್ ಶೆಟ್ಟಿ ಹರಾಜು ಪ್ರಕ್ರಿಯೆ ನಡೆಸಿದರು. ವಿಖ್ಯಾತ್ ಆಳ್ವ ವರ್ಕಾಡಿ ನಿರೂಪಿಸಿದರು. ಪ್ರಜ್ಞೇಶ್ ಶೆಟ್ಟಿ, ಸಂತೋಷ್ ಶೆಟ್ಟಿ, ಪ್ರದೀಶ್ ಶೆಟ್ಟಿ ಸಹಕರಿಸಿದರು.

You cannot copy contents of this page