ಗಾಂಜಾ ಪ್ರಕರಣ: ಆರೋಪಿಗಳಿಗೆ ಸಜೆ, ದಂಡ

ಕಾಸರಗೋಡು: ಗಾಂಜಾ ಪ್ರಕರಣದ ಇಬ್ಬರು ಆರೋಪಿಗಳಿಗೆ ಕಾಸರಗೋಡು ಹೆಚ್ಚುವರಿ ಜಿಲ್ಲಾ ಸೆಶನ್ಸ್ ನ್ಯಾಯಾಲಯ (ದ್ವಿತೀಯ)ದ ನ್ಯಾಯಾಧೀಶರಾದ ರಾಮುರಮೇಶ್ಚಂದ್ರಭಾನು ತಲಾ ಒಂದು ವರ್ಷ ಸಜೆ ಹಾಗೂ 20,000 ರೂ. ನಂತೆ ಜುಲ್ಮಾನೆ ವಿಧಿಸಿ ತೀರ್ಪು ನೀಡಿದ್ದಾರೆ.

ಕಯ್ಯಾರು ಕನ್ನಡಿಪ್ಪಾರ ಶಾಂತಿಯೋಡು ಕೆ.ಕೆ.ನಗರದ ಖಲಂದರ್ ಅಲಿಯಾಸ್ ಶಾಫಿ (34) ಮತ್ತು ದಕ್ಷಿಣಕನ್ನಡ ಜಿಲ್ಲೆಯ  ಪೆರಾಂಬೆ ಬೀರಂತ್ತಡ್ಕದ ಸಂದೇಶ್ ಬಿ (27) ಎಂಬವರಿಗೆ ಈ ಶಿಕ್ಷೆ ವಿಧಿಸಲಾಗಿದೆ. ಜುಲ್ಮಾನೆ ಪಾವತಿಸದಿದ್ದಲ್ಲಿ ಆರೋಪಿಗಳು ಎರಡು ತಿಂಗಳ ಹೆಚ್ಚುವರಿ ಸಜೆ ಅನುಭವಿಸಬೇಕಾಗಿದೆಯೆಂದು ತೀರ್ಪಿನಲ್ಲಿ ತಿಳಿಸಲಾಗಿದೆ.

೨೦೨೧ ಸೆಪ್ಟಂಬರ್ ೨೦ರಂದು ಮಧ್ಯಾಹ್ನ ಮಂಗಲ್ಪಾಡಿ ಚೂಕಿರಿಯಡ್ಕ ಎಂಬಲ್ಲಿ ಮಂಜೇಶ್ವರ ಪೊಲೀಸರು ನಡೆಸಿದ ಕಾರ್ಯಾಚರಣೆಯಲ್ಲಿ ಬೈಕ್‌ನಲ್ಲಿ ಸಾಗಿಸುತ್ತಿದ್ದ ಐದೂವರೆ ಕಿಲೋ ಗಾಂಜಾ   ಪತ್ತೆಹಚ್ಚಿದ್ದರು. ಅದಕ್ಕೆ ಸಂಬಂಧಿಸಿ   ಮಾಲನ್ನು ಬೈಕ್‌ನಲ್ಲಿ ಸಾಗಿಸುತ್ತಿದ್ದ  ಆರೋಪ ದಂತೆ ಈ ಇಬ್ಬರು ಆರೋಪಿ ಗಳನ್ನು  ಪೊಲೀಸರು  ಬಂಧಿಸಿ ಪ್ರಕರಣ ದಾಖಲಿಸಿಕೊಂಡಿದ್ದರು.

RELATED NEWS

You cannot copy contents of this page