ಕಾಸರಗೋಡು: ಹಲವು ದಿನಗಳಿಂದಾಗಿ ಭೀತಿ ಸೃಷ್ಟಿಸಿದ್ದ ಕಾಡಾನೆ ಹಿಂಡನ್ನು ಅರಣ್ಯಪಾಲಕರು ಹಿಮ್ಮೆಟ್ಟಿಸಿದ್ದಾರೆ. ಪನತ್ತಡಿ ಸೆಕ್ಷನ್ ವ್ಯಾಪ್ತಿಯಲ್ಲಿ ಮಾಂಬಳಂ, ಪೆರುಮುಂಡ, ಕಮ್ಮಾಡಿ ಮೊದಲಾದ ಜನವಾಸ ವಲಯದಲ್ಲಿ ಕಾಡಾನೆಗಳ ಉಪಟಳ ತೀವ್ರವಾಗಿತ್ತು. ನಿನ್ನೆ ಪನತ್ತಡಿ ಸೆಕ್ಷನ್ ಫಾರೆಸ್ಟ್ ಆಫೀಸರ್ ಎಂ.ಪಿ. ರಾಜುರ ನೇತೃತ್ವದಲ್ಲಿ ಕಾಸರಗೋಡು ಆರ್‌ಆರ್‌ಟಿ ಟೀಮ್, ಸೆಕ್ಷನ್ ಸ್ಟಾಫ್, ಪಿಆರ್‌ಟಿ ಸದಸ್ಯ ಎಂಬಿವರು ಸೇರಿ ಸ್ಪೆಷಲ್ ಕಾಡಾನೆ ಡ್ರೈವ್ ನಡೆಸಿ ಹಿಂಡನ್ನು ಕಾಡಿನತ್ತ ಓಡಿಸಿದ್ದಾರೆ.






