ರಸ್ತೆ ಬದಿ ಬೆಳೆದ ಹುಲ್ಲು ತೆರವುಗೊಳಿಸಿ ಮಾದರಿಯಾದ ವಿಕಲಚೇತನ ವ್ಯಕ್ತಿ

ಕುಂಬಳೆ: ದಿನಂಪ್ರತಿ ವಿದ್ಯಾರ್ಥಿಗಳ ಸಹಿತ ನೂರಾರು ಮಂದಿ ನಡೆದು ಹೋಗುವ ರಸ್ತೆ ಬದಿ ಬೆಳೆದು ನಿಂತಿದ್ದ ಹುಲ್ಲು ಸಹಿತ ಕಸಕಡ್ಡಿಗಳನ್ನು ತೆರವುಗೊಳಿಸುವ ಮೂಲಕ ವಿಕಲಚೇತನ ವ್ಯಕ್ತಿ ಇತರರಿಗೆ ಮಾದರಿಯಾಗಿದ್ದಾರೆ.

ಕುಂಬಳೆ ಹೋಲಿ ಫ್ಯಾಮಿಲಿ ಶಾಲೆ ಸಮೀಪದ ನಿವಾ ಸಿಯೂ, ಕಣಿಪುರ ಶ್ರೀ ಗೋಪಾಲಕೃಷ್ಣ ದೇವಸ್ಥಾನ ಬಳಿ ಅಂಗಡಿ ನಡೆಸುತ್ತಿರುವ ಉದಯ ಆಚಾರ್ಯ ತನ್ನ ಶ್ರಮದಾನ ಮೂಲಕ ರಸ್ತೆಯನ್ನು ಶುಚಿಗೊಳಿಸಿದ್ದಾರೆ. ಕುಂಬಳೆ ಹೋಲಿ ಫ್ಯಾಮಿಲಿ ಶಾಲೆ ಬಳಿಯಿಂದ ಕಂಚಿಕಟ್ಟೆ ಮಳಿ ಭಾಗಕ್ಕೆ ತೆರ ಳುವ ಪಂಚಾಯತ್ ರಸ್ತೆ ಬದಿ ಹುಲ್ಲು ಬೆಳೆದಿತ್ತು. ಹಗಲು-ರಾತ್ರಿ ಹಲವರು ನಡೆದು ಹೋಗುವ ಈ ರಸ್ತೆಯಲ್ಲಿ ವಿಷ ಜಂತುಗಳು ಕಾಣಿಸಿಕೊಳ್ಳುತ್ತಿತ್ತೆನ್ನಲಾಗಿದೆ. ಇದರಿಂದ  ನಡೆದಾ ಡಲು ಭಯ ಹುಟ್ಟಿಸುತ್ತಿತ್ತು. ವಾಹನಗಳು ಸಂಚರಿಸುವಾಗ ರಸ್ತೆ ಬದಿಯ ಹುಲ್ಲನ್ನು ಮೆಟ್ಟಿಕೊಂಡು ಪಾದಚಾರಿಗಳು ಹೋಗಬೇಕಾಗುತ್ತದೆ. ಆದರೆ ಈ ಹುಲ್ಲನ್ನು ತೆರವುಗೊಳಿಸಲು ಯಾರೂ ಮುಂದಾಗಿರಲಿಲ್ಲ.  ಇದರಿಂದ ಉದಯ ಆಚಾರ್ಯ ಇಂದು ಬೆಳಿಗ್ಗೆ ರಸ್ತೆಯ ಹುಲ್ಲು ತೆಗೆದು ಜನರು ಭಯಮುಕ್ತ ರಾಗಿ ನಡೆದಾಡಲು ಅವಕಾಶವೊದಗಿ ಸಿದ್ದಾರೆ. ಜನ್ಮತಃ ವಿಕಲಚೇತನರಾಗಿರುವ ಉದಯ ಆಚಾರ್ಯ ತನ್ನ ನಾಲ್ಕು ಚಕ್ರಗಳ ಸ್ಕೂಟರ್‌ನಲ್ಲಿ ಪ್ರಯಾಣಿಸಿ ತನ್ನ ಅಂಗಡಿಗೆ ತೆರಳುತ್ತಿದ್ದಾರೆ. ಇದೀಗ ಇವರು ರಸ್ತೆಯನ್ನು ಶುಚೀಕರಣ ನಡೆಸುವ ಮೂಲಕ ಇತರರಿಗೆ ಸಾಧ್ಯವಾಗದ ಕೆಲಸವನ್ನು ನಿರ್ವಹಿಸಿದ್ದು, ಈ ಮೂಲಕ ಮಾದರಿಯಾಗಿದ್ದಾರೆ.

RELATED NEWS

You cannot copy contents of this page