ಬಸ್ ನಿಲ್ದಾಣದೊಳಗೆ ವ್ಯಕ್ತಿ ನೇಣುಬಿಗಿದು ಸಾವು
ಕಾಸರಗೋಡು: ಉದುಮ ಬಸ್ ನಿಲ್ದಾಣದಲ್ಲಿ ವ್ಯಕ್ತಿಯೊ ಬ್ಬರು ನೇಣು ಬಿಗಿದು ಸಾವಿ ಗೀಡಾದ ಸ್ಥಿತಿಯಲ್ಲಿ ಪತ್ತೆಯಾ ಗಿದ್ದಾರೆ. ನಾಲಾಂವಾದುಕಲ್ ತಟ್ಟುಮ್ಮಲ್ ನಿವಾಸಿ ನಾರಾ ಯಣನ್ (೬೨) ಎಂಬವರು ಮೃತಪಟ್ಟ ವ್ಯಕ್ತಿಯೆಂದು ತಿಳಿದುಬಂದಿದೆ.
ಇಂದು ಬೆಳಿಗ್ಗೆ ಇವರು ಬಸ್ ನಿಲ್ದಾಣದೊಳಗೆ ನೇಣುಬಿಗಿದು ಸಾವಿಗೀಡಾದ ಸ್ಥಿತಿಯಲ್ಲಿ ಕಂಡುಬಂದಿದ್ದಾರೆ. ನಾರಾಯಣನ್ ಈ ಹಿಂದೆ ಆಟೋ ಚಾಲಕರಾಗಿ ಕೆಲಸ ನಿರ್ವಹಿಸುತ್ತಿದ್ದರು.
ಮೃತರು ಪತ್ನಿ ಸಾವಿತ್ರಿ, ಮಕ್ಕಳಾದ ಪ್ರಿಯಾ, ಪ್ರೀತ, ನವೀನ್, ಅಳಿಯಂದಿರಾದ ಲತೀಶ್, ಮನೋಜ್, ಸಹೋ ದರ-ಸಹೋದರಿಯರಾದ ಜಾನಕಿ, ಮಾಧವಿ, ರೋಹಿಣಿ, ವಿಜಯನ್, ರಜನಿ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.