ಬಾಯಾರು, ದೇಲಂತೊಟ್ಟು ಕ್ಷೇತ್ರದಲ್ಲಿ ವರಮಹಾಲಕ್ಷ್ಮೀ ಪೂಜೆ ಆಗಸ್ಟ್ 16ರಂದು
ಉಪ್ಪಳ: ವಿಶ್ವಹಿಂದೂ ಪರಿಷತ್ ಮಾತೃಶಕ್ತಿ ಬಾಯಾರು ಖಂಡ ಸಮಿತಿ ಆಶ್ರಯದಲ್ಲಿ 29ನೇ ವರ್ಷದ ಶ್ರೀ ವರಮಹಾಲಕ್ಷ್ಮೀ ವ್ರತಾಚರಣೆ ಆಗಸ್ಟ್ 16ರಂದು ಬೆಳಿಗ್ಗೆ 9ರಿಂದ ಬಾಯಾರು ಶ್ರೀ ಪಂಚಲಿಂಗೇಶ್ವರ ಸನ್ನಿಧಿಯಲ್ಲಿ ನಡೆಯಲಿದೆ. ಪೂರ್ವಾಹ್ನ 11ರಿಂದ ನಡೆಯುವ ಧಾರ್ಮಿಕ ಸಭೆಯಲ್ಲಿ ಸೀತಾ ವೇಣುಗೋಪಾಲ್ ಮಂಗ ಳೂರು ಅಧ್ಯಕ್ಷತೆ ವಹಿಸುವರು. ಸಾಮಾಜಿಕ ಕಾರ್ಯಕರ್ತ ಮುರಳೀಧರ ಯಾದವ ಕುಂಬಳೆ ಧಾರ್ಮಿಕ ಭಾಷಣ ಮಾಡುವರು. ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಯಶಸ್ವಿಗೊಳಿ ಬೇಕೆಂದು ಸಮಿತಿ ವಿನಂದಿಸಿದೆ.
ಉಪ್ಪಳ: ಬಜೆ ದೇಲಂತೊಟ್ಟು ಶ್ರೀ ಮಹಾವಿಷ್ಣು ದೇವಸ್ಥಾನದಲ್ಲಿ ಶ್ರೀ ಮಹಾವಿಷ್ಣು ಧೂಮಾವತಿ ರಕ್ತೇಶ್ವರಿ ದೈವ ಪರಿವಾರಗಳ ಸೇವಾ ಟ್ರಸ್ಟ್ ಇದರ ಆಶ್ರಯದಲ್ಲಿ ಶ್ರೀ ಮಹಾವಿಷ್ಣು ಮಹಿಳಾ ಸೇವಾ ಬಳಗ ಇವರ ನೇತೃತ್ವದಲ್ಲಿ ಸಮಸ್ತ ಭಕ್ತ ಜನರ ಸಹಯೋಗದೊಂದಿಗೆ ಸಾಮೂಹಿಕ ಶ್ರೀ ವರಮಹಾಲಕ್ಷ್ಮೀ ಪೂಜ ಆ. 16ರಂದು ನಡೆಯಲಿದೆ. ಸಂಜೆ 4.30ಕ್ಕೆ ಸಾಮೂಹಿಕ ಪ್ರಾರ್ಥನೆ, ಜಲಜಾಕ್ಷಿ ಕೃಷ್ಣಪ್ಪ ಐಲ್ ಇವರಿಂದ ದೀಪ ಪ್ರಜ್ವಲನೆ, ಸಂಜೆ ೫ರಿಂದ ಶ್ರೀ ವರಮಹಾಲಕ್ಷ್ಮೀ ಪೂಜೆ ಆರಂಭ, 6ರಿಂದ ಕಥಾ ವಾಚನ, 7ರಿಂದ ಮಹಾಪೂಜೆ, 7.15ರಿಂದ ಕ್ಷೇತ್ರದಲ್ಲಿ ಮಹಾಪೂಜೆ, 8ರಿಂದ ಅನ್ನಸಂತರ್ಪಣೆ ನಡೆಯಲಿದೆ.