ಬಾಯಿಕಟ್ಟೆ ಶ್ರೀ ಅಯ್ಯಪ್ಪ ಮಂದಿರದಲ್ಲಿ ಉಚಿತ ವೈದ್ಯಕೀಯ ತಪಾಸಣೆ, ಚಿಕಿತ್ಸಾ ಶಿಬಿರ 20ರಂದು
ಪೈವಳಿಕೆ: ಕೊಂಡೆವೂರು ಶ್ರೀ ನಿತ್ಯಾನಂದ ಮಹಾಪೀಠಂ ಚಾರಿಟೇ ಬಲ್ ಟ್ರಸ್ಟ್,ಶಾರದಾ ಆಯುರ್ವೇದ ವೈದ್ಯಕೀಯ ಕಾಲೇಜು ಆಸ್ಪತ್ರೆ ತಲಪಾಡಿ, ಶ್ರೀ ಅಯ್ಯಪ್ಪ ಮಂದಿರ ಬಾಯಿಕಟ್ಟೆ ಇವರ ಜಂಟಿ ಆಶ್ರಯದಲ್ಲಿ ಶ್ರೀ ಅಯ್ಯಪ್ಪ ಸೇವಾ ಸಮಿತಿ ಹಾಗೂ ಎಎಸ್ಕೆ ಕ್ಲಬ್ ಬಾಯಿಕಟ್ಟೆ ಇವರ ಸಹಯೋಗದಲ್ಲಿ ಉಚಿತ ತಪಾಸಣೆ ಹಾಗೂ ಚಿಕಿತ್ಸಾ ಶಿಬಿರ ಈ ತಿಂಗಳ 20ರಂದು ಬೆಳಿಗ್ಗೆ 9ರಿಂದ ಬಾಯಿಕಟ್ಟೆ ಶ್ರೀ ಅಯ್ಯಪ್ಪ ಮಂದಿರದ ಸಭಾಗೃಹದಲ್ಲಿ ನಡೆಯಲಿದೆ. ಸಂಧಿವಾತ, ಡಿಸ್ಕ್ ಸಮಸ್ಯೆ, ಬೆನ್ನು, ಸೊಂಟನೋವು, ಸೋರಿಯಾಸಿಸ್, ಚರ್ಮದ ಅಲರ್ಜಿ, ತರಿಕೆ, ಕೆಂಪು, ತೊನ್ನು ಮೊದಲಾದ ಚರ್ಮದ ತೊಂದರೆ ಗಳನ್ನು ಅನುಭವಿಸುತ್ತಿರುವವರು ಶಿಬಿರದ ಉಪಯೋಗ ಪಡೆದು ಕೊಳ್ಳಬ ಹುದು. ಬೆಳಿಗ್ಗೆ 9ಕ್ಕೆ ಹೆಸರು ನೋಂದಾ ಯಿಸಬೇಕಾಗಿದೆ. ಒಂದು ವಾರದ ಔಷಧ ಉಚಿತವಾಗಿ ಲಭಿಸುವುದು ಎಂದು ಸಂಬAಧಪಟ್ಟವರು ತಿಳಿಸಿದ್ದಾರೆ. 9449079655ರಿಂದ ಹೆಚ್ಚಿನ ಮಾಹಿತಿ ಲಭಿಸುವುದು.