ಬಿಜೆಪಿಯ ಹಿರಿಯ ಕಾರ್ಯಕರ್ತ ನಿಧನ
ಉಪ್ಪಳ: ಇಚ್ಲಂಗೋಡು ಗೋಳಿತ್ತಡಿ ಅಕ್ಕಾರಿ ಹಿತ್ಲು ನಿವಾಸಿ ಬಿಜೆಪಿ, ಆರ್.ಎಸ್.ಎಸ್ ಸಕ್ರಿಯ ಕಾರ್ಯಕರ್ತರಾಗಿದ್ದ ರಾಧಾಕೃಷ್ಣ ಶೆಟ್ಟಿ [೬೪] ಇಂದು ಬೆಳಿಗ್ಗೆ ಕುಂಬಳೆ ಜಿಲ್ಲಾ ಸಹಕಾರಿ ಆಸ್ಪತ್ರೆಯಲ್ಲಿ ನಿಧನರಾದರು. ಕಳೆದ ಒಂದು ವಾರದ ಹಿಂದೆ ಅಸೌಖ್ಯ ಬಾಧಿಸಿ ಚಿಕಿತ್ಸೆಯಲ್ಲಿದ್ದರು. ಇವರು ಈ ಹಿಂದೆ ಹಲವು ವರ್ಷಗಳ ಕಾಲ ಕುಬಣೂರು ವಿದ್ಯಾನಗರದಲ್ಲಿ ವ್ಯಾಪಾರಿಯಾಗಿದ್ದರು. ಕೃಷಿಕರೂ ಆಗಿದ್ದಾರೆ. ಇಚ್ಲಂಗೋಡು ಶ್ರೀ ಮಹಾಗಣಪತಿ ಮಹಾವಿಷ್ಣು ಸದಾಶಿವ ದೇವಸ್ಥಾನದ ಆಡಳಿತ ಹಾಗೂ ಜೀರ್ಣೋದ್ದಾರ ಸಮಿತಿಗಳಲ್ಲಿ ಪದಾಧಿಕಾರಿಯಾಗಿ, ಮಂಗಲ್ಪಾಡಿ ಸೇವಾ ಸಹಕಾರಿ ಬ್ಯಾಂಕ್ ಮಾಜಿ ನಿರ್ದೇಶಕ, ಇಚ್ಲಂಗೋಡು ಶ್ರೀಶಾರದಾಂಬಾ ಎಜ್ಯುಕೇಶನ್ ಟ್ರಸ್ಟ್ ಸದಸ್ಯರಾಗಿ ಸೇವೆ ಸಲ್ಲಿಸಿದ್ದಾರೆ.
ಮೃತರು ಪತ್ನಿ ಗೀತಾ, ಮಕ್ಕಳಾದ ರಾಕೇಶ್, ರಕ್ಷಿತ್, ಸೊಸೆ ಶ್ರುತಿ, ಸಹೋದರ, ಸಹೋದರಿ ಯರಾದ ಪಕೀರ ಶೆಟ್ಟಿ, ರಘುನಾಥ ಶೆಟ್ಟಿ, ಸಂಕಪ್ಪ ಶೆಟ್ಟಿ, ಗೋಪಿ, ದೇವಕಿ, ರಾಜೀವಿ ಹಾಗೂ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ. ತಂದೆ ಐತ್ತಪ್ಪ ಶೆಟ್ಟಿ ತಾಯಿ ಕಮಲ ಈ ಹಿಂದೆ ನಿಧನರಾಗಿದ್ದಾರೆ.