ಬಿಲ್ಲವ ಸಮಾಜದ ಮಹಿಳೆಯರ ವಿರುದ್ಧ ಅರಣ್ಯಾಧಿಕಾರಿಯಿಂದ ಅವಹೇಳನಕಾರಿ ಪೋಸ್ಟ್: ಹಿಂದೂ ಸಂಘಟನೆಗಳಿಂದ ನಾಳೆ ಬೃಹತ್ ಪ್ರತಿಭಟನೆ
ಮಂಗಳೂರು: ಬಿಲ್ಲವ ಸಮಾಜದ ಮಹಿಳೆಯರ ವಿರುದ್ಧ ಅವಹೇಳನಕರವಾದ ರೀತಿಯಲ್ಲಿ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಾಕಿದ ಕಾಣಿಯೂರು ಅರಣ್ಯಾಧಿಕಾರಿ ಸಂಜೀವರ ವಿರುದ್ಧ ವಿವಿಧ ಹಿಂದೂ ಸಂಘಟನೆಗಳು ಪ್ರತಿಭಟನೆಗೆ ಮುಂದಾಗಿವೆ. ಈ ವ್ಯಕ್ತಿಯ ವಿರುದ್ಧ ಬೆಳ್ಳಾರೆ ಠಾಣೆ ಹಾಗೂ ಮಂಗಳೂರು ಅರಣ್ಯಾಧಿಕಾರಿ ಮರಿಯಪ್ಪರಿಗೆ ದೂರು ನೀಡಲಾಗಿದ್ದು, ಪ್ರಕರಣ ದಾಖಲಿಸಲಾಗಿದೆ. ಈ ಹಿಂದೆಯೂ ಸಂಜೀವ ಅವಹೇಳನಕಾರಿಯಾಗಿ ಹೇಳಿಕೆ ನೀಡಿದ್ದ ಹಿನ್ನೆಲೆಯಲ್ಲಿ ಕರ್ತವ್ಯದಿಂದ ವಜಾ ಮಾಡಲಾಗಿತ್ತು.
ಆದರೆ ಆ ಬಳಿಕ ವಿವಿಧ ಅಧಿಕಾರಿಗಳನ್ನು ಸ್ವಾಧೀನಿಸಿ ಮತ್ತೆ ಕರ್ತವ್ಯಕ್ಕೆ ಹಾಜರಾಗಿರು ವುದಾಗಿ ಹೇಳಲಾಗುತ್ತಿದೆ. ಈಗ ಮತ್ತೆ ಮಹಿಳೆಯರ ವಿರುದ್ಧ ಅವಹೇಳ ನಕಾರಿ ಹೇಳಿಕೆ ನೀಡಿದ್ದು, ಇದನ್ನು ಪ್ರತಿಭಟಿಸಿ ನಾಳೆ ಹಿಂದೂ ಜಾಗರಣ ವೇದಿಕೆ ಪುತ್ತೂರು ಜಿಲ್ಲೆ ಇದರ ವತಿಯಿಂದ ಬೃಹತ್ ಪ್ರತಿಭಟನೆ ಪುತ್ತೂರು ಮಹಾಲಿಂಗೇಶ್ವರ ದೇವರ ಗದ್ದೆಯಲ್ಲಿ ನಡೆಸಲು ತೀರ್ಮಾನಿಸಲಾಗಿದೆ. ಬೆಳಿಗ್ಗೆ 10 ಗಂಟೆಗೆ ಪ್ರತಿಭಟನೆ ಆರಂಭಗೊಳ್ಳಲಿದೆ. ಸಂಜೀವನ ವಿರುದ್ಧ ವಿವಿಧ ಹಿಂದೂ ಸಂಘಟನೆಗಳು ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಪ್ರತಿಭಟನೆ ಕಂಡುಬರುತ್ತಿವೆ.