ಬೀಚ್ಗಳಲ್ಲಿ ಭದ್ರತೆ ಖಚಿತಪಡಿಸಲು ಶಾಸಕ ಇ. ಚಂದ್ರಶೇಖರನ್ ಆಗ್ರಹ
ಕಾಸರಗೋಡು: 74 ಕಿಲೋ ಮೀಟರ್ ಉದ್ದದ ಜಿಲ್ಲೆಯ ಕರಾವಳಿ ಪ್ರದೇಶದಲ್ಲಿ ಮಕ್ಕಳು ಸಹಿತ ನೂರಾರು ಮಂದಿ ದಿನವೂ ಸಂದರ್ಶಿಸುತ್ತಿದ್ದು, ಪ್ರಧಾನ ಬೀಚ್ಗಳಲ್ಲಿ ಭದ್ರತೆಗೆ ಫಲಪ್ರದವಾದ ದಾರಿ ಇಲ್ಲದಿರುವುದು ಆತಂಕಕ್ಕೆ ಕಾರಣವಾಗಿದೆ. ಜಿಲ್ಲೆಯಲ್ಲಿ ಲೈಫ್ ಗಾರ್ಡ್ ಇರುವುದು ಪಳ್ಳಿಕೆರೆಯಲ್ಲಿ ಮಾತ್ರವಾಗಿದೆ. ಹೊಸದುರ್ಗ ಬೀಚ್ನಲ್ಲಿ ಲೈಫ್ ಗಾರ್ಡ್ನ್ನು ನೇಮಕಗೊಳಿಸಬೇಕೆಂದು ಜಿಲ್ಲಾ ಅಭಿವೃದ್ಧಿ ಸಮಿತಿ ಸಭೆಯಲ್ಲಿ ಶಾಸಕ ಇ. ಚಂದ್ರಶೇಖರನ್ ಆಗ್ರಹಿಸಿದರು. ಜಿಲ್ಲಾ ಟೂರಿಸಂ ಪ್ರಮೋಶನ್ ಕೌನ್ಸಿಲ್ನ ನಿಯಂತ್ರಣ ದಲ್ಲಿರುವ ಟೂರಿಸಂ ಬೀಚ್ಗಳನ್ನು ನಡೆಸುವುದಕ್ಕಾಗಿ ಟೆಂಡರ್ ಆಹ್ವಾನಿಸು ವಾಗ ಲೈಫ್ಗಾರ್ಡ್ನ್ನು ನೇಮಕಗೊ ಳಿಸಬೇಕಾಗಿರುವುದು ವ್ಯವಸ್ಥೆಯಲ್ಲಿ ಸೇರಿಸಬೇಕೆಂದು ಜಿಲ್ಲಾಧಿಕಾರಿ ನಿರ್ದೇಶ ನೀಡಿದರು. ಡಿಟಿಪಿಸಿ ಎಕ್ಸಿಕ್ಯೂಟಿವ್ ಸಭೆಯಲ್ಲಿ ಅಜೆಂಡಾವಾಗಿ ಸೇರಿಸಲು ತೀರ್ಮಾನಿಸಲಾಯಿತು.
ಶಾಸಕರ ನಿಧಿ ಉಪಯೋಗಿಸಿ ಸ್ಥಾಪಿಸಿದ ಹೈಮಾಸ್ಟ್ ಮಿನಿ ಮಾಸ್ಟ್ಲೈಟ್ಗಳು ಹಲವೆಡೆಗಳಲ್ಲಿ ಉರಿಯದಿರುವ ಬಗ್ಗೆ ಲಭಿಸಿದ ದೂರನ್ನು ಪರಿಹರಿಸಲು ಕ್ರಮ ಕೈಗೊಳ್ಳಬೇಕೆಂದು ಶಾಸಕ ಇ. ಚಂದ್ರಶೇಖರನ್ ನಿರ್ದೇಶಿಸಿದರು. ಇದೇ ವೇಳೆ ದುರಸ್ತಿ ನಡೆಸಲು ಕಂಪೆನಿಗಳು ತಯಾರಾಗುತ್ತಿಲ್ಲ ವೆಂದೂ ಅವರು ತಿಳಿಸಿದರು.