ಬೆಂಕಿ ಆಕಸ್ಮಿಕದಿಂದ ಪುತ್ತಿಗೆ ಪಂ. ಸದಸ್ಯೆಯ ಮನೆ ಉರಿದು ಸಂಪೂರ್ಣ ನಾಶ
ಪುತ್ತಿಗೆ: ಪಂಚಾಯತ್ನ 10ನೇ ವಾರ್ಡ್ ಪ್ರತಿನಿಧಿ ಅನಿತಾಶ್ರೀಯವರ ಮನೆ ಸಂ ಪೂರ್ಣವಾಗಿ ಉರಿದು ನಾಶವಾದ ಘಟನೆ ನಿನ್ನೆ ನಡೆದಿದೆ. ನಿನ್ನೆ ಸಂಜೆ ೪ ಗಂಟೆ ವೇಳೆ ಈ ಘಟನೆ ನಡೆದಿದ್ದು, ಮನೆಯೊಳಗಿದ್ದ ಟಿವಿ, ಫ್ರಿಡ್ಜ್, ಫ್ಯಾನ್, ದಾಖಲುಪತ್ರಗಳು, ಲ್ಯಾಪ್ಟಾಪ್, ಬಟ್ಟೆಬರೆ ಸಹಿತ ಎಲ್ಲವೂ ಉರಿದು ಭಸ್ಮವಾಗಿದೆ.
ಮನೆಯೊಳಗಿನಿಂದ ಬೆಂಕಿ ಕಂಡು ಬಂದ ಹಿನ್ನೆಲೆಯಲ್ಲಿ ನೆರೆಮನೆಯವರು ನೀಡಿದ ಮಾಹಿತಿಯಂತೆ ಸ್ಥಳೀಯರು ಹಾಗೂ ಉಪ್ಪಳದಿಂದ ತಲುಪಿದ ಅಗ್ನಿಶಾಮಕ ದಳ ಬೆಂಕಿ ನಂದಿಸಲು ಪ್ರಯತ್ನಿಸಿದೆ. ಆದರೆ ಈ ವೇಳೆಗೆ ಮನೆ ಉರಿದು ನಾಶಗೊಂಡಿದೆ. ಹೆಂಚು ಹಾಕಿದ ಮನೆ ಹಾಗೂ ವಿವಿಧ ಉಪಕರಣಗಳು ಉರಿದು ನಾಶವಾದ ಹಿನ್ನೆಲೆಯಲ್ಲಿ ಸುಮಾರು 4 ಲಕ್ಷದಷ್ಟು ರೂ. ನಷ್ಟವಾಗಿದೆ ಎಂದು ಮನೆಯವರು ತಿಳಿಸಿದ್ದಾರೆ. ವಿದ್ಯುತ್ ಶಾರ್ಟ್ ಸರ್ಕ್ಯೂಟ್ ಬೆಂಕಿಗೆ ಕಾರಣವೆನ್ನಲಾ ಗಿದೆ. ಘಟನೆ ವೇಳೆ ಅನಿತಶ್ರೀ ಹಾಗೂ ಪತಿ ರಾಮ ಕೆಲಸಕ್ಕೆ ತೆರಳಿದ್ದು, ಇಬ್ಬರು ಮಕ್ಕಳಾದ ಕಾರ್ತಿಕ್, ವೈಶಾಖ್ ಮಂಗಳೂರಿನಲ್ಲಿ ಕಾಲೇಜ್ ವಿದ್ಯಾರ್ಥಿ ಗಳಾಗಿದ್ದಾರೆ. ಮನೆಯಲ್ಲಿ ಯಾರೂ ಇಲ್ಲದ ವೇಳೆ ಬೆಂಕಿ ಆಕಸ್ಮಿಕ ಸಂಭವಿ ಸಿದೆ. ಪಂಚಾಯತ್ನ 10ನೇ ವಾರ್ಡ್ ಬಿಜೆಪಿ ಸದಸ್ಯೆಯಾಗಿದ್ದಾರೆ ಅನಿತಾಶ್ರೀ.