ಬೆಳ್ಳೂರು ಕ್ಷೇತ್ರದಿಂದ ಎಡನೀರು ಮಠಕ್ಕೆ ಹಸಿರುವಾಣಿ ಸಮರ್ಪಣೆ : ಸಭೆ 25ರಂದು
ಮುಳ್ಳೇರಿಯ: ಎಡನೀರು ಮಠದಲ್ಲಿ ನಡೆಯುತ್ತಿರುವ ಶ್ರೀ ಸಚ್ಚಿದಾನಂದ ಭಾರತೀ ಶ್ರೀಪಾದಂಗಳವರ ಚಾತುರ್ಮಾಸ್ಯ ವ್ರತಾಚರಣೆ ಅಂಗವಾಗಿ ಬೆಳ್ಳೂರು ಶ್ರೀ ಮಹಾವಿಷ್ಣು ಕ್ಷೇತ್ರದಿಂದ ಸೆಪ್ಟಂಬರ್ ೪ರಂದು ಹಸಿರುವಾಣಿ ಸಮರ್ಪಣೆ ನಡೆಯಲಿರುವುದು. ಇದರ ಯಶಸ್ವಿಗಾಗಿ ಚಾತುರ್ಮಾಸ್ಯ ಸಮಿತಿಯ ಬೆಳ್ಳೂರು ಘಟಕದ ಸಭೆ ಈ ತಿಂಗಳ 25ರಂದು ಬೆಳಿಗ್ಗೆ 10 ಗಂಟೆಗೆ ಬೆಳ್ಳೂರು ಶ್ರೀ ಮಹಾವಿಷ್ಣು ಕ್ಷೇತ್ರದಲ್ಲಿ ನಡೆಯಲಿದೆ. ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕೆಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.