ಬೈಕ್‌ನಲ್ಲಿ ಸಾಗಿಸುತ್ತಿದ್ದ ಕರ್ನಾಟಕ ಮದ್ಯ ವಶ: ಓರ್ವ ಸೆರೆ
ಮಂಜೇಶ್ವರ: ಉದ್ಯಾವರ ಚೌಕಿ ಜಂಕ್ಷನ್ ಬಳಿ ಕುಂಬಳೆ ಅಬಕಾರಿ ರೇಂಜ್ ಕಚೇರಿಯ ಪ್ರಿವೆಂಟೀವ್ ಆಫೀಸರ್ ಟಿ.ಎಂ. ಮೊದೀನ್ ಸಾಧಿಕ್‌ರ ನೇತೃತ್ವದ ತಂಡ ನಿನ್ನೆ ನಡೆಸಿದ ಕಾರ್ಯಾಚರಣೆಯಲ್ಲಿ ಬೈಕ್‌ನಲ್ಲಿ ಸಾಗಿಸುತ್ತಿದ್ದ 7.02 ಲೀಟರ್ ಕರ್ನಾಟಕ ಮದ್ಯ ಪತ್ತೆಹಚ್ಚಿ ವಶಪಡಿಸಿಕೊಂಡಿದೆ. ಇದಕ್ಕೆ ಸಂಬಂಧಿಸಿ ಉದ್ಯಾವರ ಅಂಬಿತ್ತಡಿಯ ಸಂತೋಷ್ ಕುಮಾರ್ ಎ.(36) ಎಂಬಾತನನ್ನು ಬಂಧಿಸಿ ಪ್ರಕರಣ ದಾಖಲಿಸಲಾಗಿದೆ. ಮಾಲು ಸಾಗಿಸಲು ಬಳಸಲಾದ ಬೈಕನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ. ಸಿವಿಲ್ ಎಕ್ಸೈಸ್ ಆಫೀಸರ್ ಎಂ. ಹಮೀದ್‌ರಿಗೆ ಲಭಿಸಿದ ಗುಪ್ತ ಮಾಹಿತಿಯಂತೆ ಈ ದಾಳಿ ನಡೆಸಲಾಗಿದೆ. ಈ ತಂಡದಲ್ಲಿ ಪ್ರಿವೆಂಟಿವ್ ಆಫೀಸರ್ ಗ್ರೇಡ್ ರಮೇಶನ್ ಆರ್, ಸಿಇಒಗಳಾದ ಜಿತಿನ್ ಪಿ.ವಿ, ಚಾಲಕ ಪ್ರವೀಣ್ ಕುಮಾರ್ ಪಿ. ಎಂಬವರು ಒಳಗೊಂಡಿದ್ದಾರೆ.