ಮಂಜೇಶ್ವರದಲ್ಲಿ ವಿಶೇಷ ನೆರೆಹೊರೆ ಕೂಟ ಸಂಗಮ
ಹೊಸಂಗಡಿ: ಕುಟುಂಬಶ್ರೀ ಜಿಲ್ಲಾ ಮಿಷನ್ ಕಾಸರಗೋಡು ಕೊರಗ ವಿಶೇಷ ಯೋಜನೆಯ ನೇತೃತ್ವದಲ್ಲಿ ನೆರೆಕರೆ ಕೂಟಗಳ ಸಂಗಮ ನಡೆಸಲಾ ಯಿತು. ಮಂಜೇಶ್ವರ ಕಲಾ ಸ್ಪರ್ಶ ಸಭಾಂಗಣದಲ್ಲಿ ನಡೆದ ಕಾರ್ಯ ಕ್ರಮದಲ್ಲಿ 350 ಕೊರಗ ನೆರೆಕರೆ ಸದಸ್ಯರು ಭಾಗವಹಿಸಿದ್ದರು. ಈ ವೇಳೆ ಹಸಿರು ನೆರೆಕರೆ ಕೂಟದ ಘೋಷಣೆ ಯನ್ನು ಜಿಲ್ಲಾಧಿಕಾರಿ ಕೆ.ಇಂಬ ಶೇಖರ್ ನಿರ್ವಹಿಸಿದರು. ಜಿಲ್ಲಾ ಮಿಷನ್ ಸಂಯೋಜಕ ಟಿ.ಟಿ. ಸುರೇಂ ದ್ರನ್ ಯೋಜನೆ ಬಗ್ಗೆ ವಿವರಿಸಿದರು.
ಮಂಜೇಶ್ವರ ಪಂಚಾಯತ್ ಅಧ್ಯಕ್ಷೆ ಜೀನ್ ಲವೀನಾ ಮೊಂತೇರೋ ಅಧ್ಯಕ್ಷತೆ ವಹಿಸಿದ್ದರು. ಜನಪ್ರತಿನಿಧಿಗಳು, ಎಡಿಎಂಸಿ ಕಿಶೋರ್ ಕುಮಾರ್ ಭಾಗ ವಹಿಸಿದ್ದರು. ಕೊರಗ ಸಮುದಾಯದ ಹಿರಿಯ ನಾಗರಿಕರನ್ನು ಸ್ಮರಣಿಕೆ ನೀಡಿ, ವಿವಿಧ ಕ್ಷೇತ್ರಗಳಲ್ಲಿ ತಮ್ಮ ಸಾಮರ್ಥ್ಯ ಪ್ರದರ್ಶಿಸಿದವರನ್ನು ಸನ್ಮಾನಿಸಲಾಯಿತು. ನಂತರ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು. ಮಂಜೇಶ್ವರ ಸಿಡಿಎಸ್ ಅಧ್ಯಕ್ಷೆ ಜಯಶ್ರೀ ಸ್ವಾಗತಿಸಿ, ಕೊರಗ ವಿಶೇಷ ಯೋಜನೆಯ ಸಹಾಯಕ ಸಂಯೋಜಕ ಎಸ್.ಯದುರಾಜ್ ವಂದಿಸಿದರು.