ಮಂಜೇಶ್ವರ ರೈಲ್ವೇ ನಿಲ್ದಾಣ ಅಭಿವೃದ್ಧಿ ಕಾಮಗಾರಿ ಆಮೆನಡಿಗೆಯಲ್ಲಿ: ಕೆಸರುಗದ್ದೆಯಾದ ಫ್ಲಾಟ್‌ಫಾರ್ಮ್‌ನಿಂದ ಪ್ರಯಾಣಿಕರಿಗೆ ಸಂಕಷ್ಟ
ಮಂಜೇಶ್ವರ: ಮಂಜೇಶ್ವರ ರೈಲ್ವೇ ನಿಲ್ದಾಣದಲ್ಲಿ ಅಭಿವೃದ್ದಿ ಕಾಮಗಾರಿ ಅಮೆ ನಡಿಗೆಯಲ್ಲಿ ಸಾಗುತ್ತಿದ್ದು, ಫ್ಲಾಟ್‌ಫಾರ್ಮ್ ಕೆಸರುಗದ್ದೆಯಂತಾಗಿ ಪ್ರಯಾಣಿಕರಿಗೆ ಸಂಚರಿಸಲು ಸಮಸ್ಯೆ ಉಂಟಾಗಿರುವುದಾಗಿ ಸ್ಥಳೀಯರು ದೂರಿದ್ದಾರೆ. ಹಳೆಯ ಫ್ಲಾಟ್‌ಫಾರ್ಮ್ನ್ನು ಕೆಡವಿ ಮಣ್ಣು ಹಾಕಿ ಎತ್ತರಗೊಳಿಸುವ ಕೆಲಸ ಹಾಗೂ ಇತರ ಅಭಿ ವೃದ್ದಿ ಕಾಮಗಾರಿ ನಡೆಯುತ್ತಿದೆ. ಆದರೆ ಕಾಮಗಾರಿ ನಿಧಾನ ಗತಿಯಲ್ಲಿ ನಡೆಯುತ್ತಿರುವುದರಿಂದ ಮಳೆಗೆ ಪ್ಲಾಟ್ ಫಾರ್ಮ್ಗೆ ಹಾಕಿದ ಮಣ್ಣು ಕೆಸರು ಗದ್ದೆಯಾಗಿ ಶೋಚ ನೀಯವಾಗಿದ್ದು, ಇದರಿಂದ ಪ್ರಯಾಣಿಕರಿಗೆ, ಕುಳಿತು ಕೊಳ್ಳಲು, ನಡೆದಾಡಲು ಸಾಧ್ಯವಾಗದಂತ ಸ್ಥಿತಿ ಉಂಟಾಗಿ ವುದಾಗಿ ದೂರಲಾಗಿದೆ. ಕೂಡಲೇ ಕಾಮಗಾರಿಯನ್ನು ಪೂರ್ತಿಗೊಳಿಸಿ ಪ್ರಯಣಿಕರ ಸಮಸ್ಯೆಯನ್ನು ಪರಿಹರಿಸಬೇಕೆಂದು ಸ್ಥಳೀಯರು ಆಗ್ರಹಿಸಿದ್ದಾರೆ.