ಮತ್ತೆ ಕಾಳಧನ ಬೇಟೆ : 11.26 ಲಕ್ಷ ರೂ. ಸಹಿತ ಇಬ್ಬರ ಸೆರೆ

ಕಾಸರಗೋಡು: ಯಾವುದೇ ದಾಖಲೆಗಳಿಲ್ಲದೆ ಮನೆಗಳಲ್ಲಿ ಬಚ್ಚಿಡಲಾಗಿದ್ದ ೧೧.೨೬ ಲಕ್ಷ ರೂಪಾಯಿಗಳನ್ನು ಮೇಲ್ಪರಂಬ ಪೊಲೀಸರು ವಶಪಡಿಸಿಕೊಂಡಿದ್ದಾರೆ. ಘಟನೆಗೆ ಸಂಬಂಧಿಸಿ ಇಬ್ಬರನ್ನು ಬಂಧಿಸಲಾಗಿದೆ. ವಿದ್ಯಾನಗರ ಎರ್ದುಂಕಡವಿನ ಅಬ್ದುಲ್ ಹಮೀದ್ (೫೪), ಕೀಳೂರಿನ ಅಸ್ಲಾಂ (೪೭) ಎಂಬಿವರು ಬಂಧಿತ ವ್ಯಕ್ತಿಗ ಳೆಂದು ಪೊಲೀಸರು ತಿಳಿಸಿದ್ದಾರೆ.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪಿ.ಬಿ. ಜೋಯ್ ಅವರಿಗೆ ಲಭಿಸಿದ ಗುಪ್ತ ಮಾಹಿತಿಯ ಆಧಾರದಲ್ಲಿ ಪೊಲೀಸರು ಕಾರ್ಯಾಚರಣೆ ನಡೆಸಿದ್ದಾರೆ. ಮೊದಲು ಅಬ್ದುಲ್ ಹಮೀದ್‌ನ  ಕೈಯಿಂದ ೩,೦೧,೧೬೦ ರೂಪಾಯಿ ವಶಪಡಿಸಲಾಗಿದೆ. ಈತನನ್ನು ತನಿಖೆಗೊಳಪಡಿಸಿದಾಗ ಕೀಳೂರಿನ ಅಸ್ಲಾಂಗೆ ನೀಡಲು ಈ ಹಣ ತಂದಿರುವುದಾಗಿ  ಆತ ಹೇಳಿಕೆ ನೀಡಿದ್ದನು. ಇದರಂತೆ ನ್ಯಾಯಾಲಯದ ಅನುಮತಿಯೊಂದಿಗೆ ಅಸ್ಲಾಂನ ಮನೆಯಲ್ಲಿ  ತಪಾಸಣೆ ನಡೆಸಿದಾಗ ೮.೨೫ ಲಕ್ಷ ರೂಪಾಯಿ ಪತ್ತೆಹಚ್ಚಲಾಗಿದೆ. ಹಮೀದ್ ಕಾಳಧನ ವಿತರಣೆಗಾರನಾಗಿ ದ್ದಾನೆಂದು ಸಂಶಯಿಸಲಾಗುತ್ತಿ ದೆಯೆಂದು ಪೊಲೀಸರು ತಿಳಿಸಿದ್ದಾರೆ. ಹಣ ವಿತರಣೆಯಾಗಬೇಕಾದವರ ಪಟ್ಟಿಯನ್ನು ಈತನ ಕೈಯಿಂದ ವಶಪಡಿಸಲಾಗಿದೆ. ಬಂಧಿತರ ತನಿಖೆ ನಡೆಯುತ್ತಿದೆಯೆಂದು ಪೊಲೀಸರು ತಿಳಿಸಿದ್ದಾರೆ.

ಮೇಲ್ಪರಂಬ ಇನ್‌ಸ್ಪೆಕ್ಟರ್ ಎಂ.ಆರ್. ಅರುಣ್ ಕುಮಾರ್, ಎಸ್‌ಐಗಳಾದ ಇ.ವಿ. ಅಬ್ದುಲ್ ರಹಿಮಾನ್, ಎ.ಎನ್. ಸುರೇಶ್ ಕುಮಾರ್,  ಸಿಪಿಒಗಳಾದ ಹಿತೇಶ್, ಪ್ರಶಾಂತಿ, ನಿಜಿಲ್ ಕುಮಾರ್, ರಜೀಶ್ ಎಂಬಿವರು ಕಾರ್ಯಾಚರಣೆ ನಡೆಸಿದ ತಂಡದಲ್ಲಿದ್ದರು.

Leave a Reply

Your email address will not be published. Required fields are marked *

You cannot copy content of this page