ಮಧೂರು: ಉಚಿತ ಆಯುರ್ವೇದ ವೈದ್ಯಕೀಯ ಶಿಬಿರ
ಮಧೂರು: ಕೇರಳ ಸರಕಾರದ ಆಯುಷ್ ಇಲಾಖೆ, ಮಧೂರು ಪಂಚಾಯತ್ ಆಯುಷ್ ಪಿಎಚ್‌ಸಿ, ಮುಳಿಯಾರು ಪಂಚಾಯತ್ ಆಯುಷ್ ಪಿಎಚ್‌ಸಿ ಇದರ ಜಂಟಿ ಆಶ್ರಯದಲ್ಲಿ ಉಚಿತ ಆಯುರ್ವೇದ ವಯೋಜನ ವೈದ್ಯಕೀಯ ಶಿಬಿರ ಕೇಳುಗುಡ್ಡೆ ದೀನ್‌ದಯಾಳ್ ಕಮ್ಯೂನಿಟಿ ಸಭಾಂಗಣದಲ್ಲಿ ಜರಗಿತು. ಮಧೂರು ಪಂಚಾಯತ್ ಅಧ್ಯಕ್ಷ ಗೋಪಾಲಕೃಷ್ಣ ಕೆ ಉದ್ಘಾಟಿಸಿದರು. ಉಪಾಧ್ಯಕ್ಷೆ ಸ್ಮಿಜಾ ವಿನೋದ್ ಅಧ್ಯಕ್ಷತೆ ವಹಿಸಿದರು. ಮಧೂರು ಆಯುಷ್ ಪಿಎಚ್‌ಸಿಯ ವೈದ್ಯಾಧಿಕಾರಿ ಡಾ| ಸತ್ಯೇಂದ್ರ ಸಿ.ಡಿ ಸ್ವಾಗತಿಸಿ, ವಾರ್ಡ್ ಪ್ರತಿನಿಧಿ ಸೌಮ್ಯಾ ದಿನೇಶ್ ವಂದಿಸಿದರು. ವಿವಿಧ ವಾರ್ಡ್‌ಗಳ ಸದಸ್ಯರು ಉಪಸ್ಥಿತರಿದ್ದರು. ಡಾ| ಇನ್ಸಿ ಗಾರ್ಗಿ, ಡಾ| ಗಣೇಶ್ ಕುಮಾರ್ ಕೆ, ಥೆರಾಫಿಸ್ಟ್ ಸ್ವಪ್ನ ಕೆ.ಸಿ ಸಹಿತ ಹಲವರು ಭಾಗವಹಿಸಿದರು.