ಮಧೂರು ಬಂಟರ ಸಮಾವೇಶ, ನೂತನ ಕಾರ್ಯಾಲಯ ಉದ್ಘಾಟನೆ 12ರಂದು
ಮಧೂರು :ಬಂಟರ ಸಮಿತಿ ಮಧೂರು ಪಂಚಾಯತ್ ಸಮಾವೇಶ ನೂತನ ಕಾರ್ಯಾಲಯದ ಉದ್ಘಾಟನೆ ಹಾಗೂ ತೆರೆದ ರಂಗ ಮಂದಿರದ ಲೋಕಾರ್ಪಣೆ ಸಮಾರಂಭ ಈ ತಿಂಗಳ 12ರಂದು ರವಿವಾರ ಬೆಳಿಗ್ಗೆ ಮಧೂರು ಸಮೀಪದ ಪರಕ್ಕಿಲ ದಲ್ಲಿ ಜರಗಲಿದೆ. ಕಾರ್ಯಕ್ರಮದ ಅಂಗವಾಗಿ ಬೆಳಿಗ್ಗೆ ಶ್ರೀ ಮಹಾ ಗಣಪತಿ ಹೋಮ ಬಳಿಕ ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜೆ ನಡೆಯಲಿದೆ.
ಬೆಳಿಗ್ಗೆ 11 ಘಂಟೆಗೆ ಬಂಟರ ಯಾನೆ ನಾಡವರ ಮಾತೃ ಸಂಘ ಮಂಗಳೂರು ಇದರ ಅಧ್ಯಕ್ಷ ಅಜಿತ್ ಕುಮಾರ್ ರೈ ಮಾಲಾಡಿ ಉದ್ಘಾಟಿಸುವರು. ಮಧೂರು ಸಮಿತಿ ಬಂಟರ ಸಂಘದ ಅಧ್ಯಕ್ಷ ರಾಮಕೃಷ್ಣ ಆಳ್ವ ಅಧ್ಯಕ್ಷತೆ ವಹಿಸುವರು. ಬೆಂಗಳೂರು ಬಂಟರ ಸಂಘದ ಶೈಕ್ಷಣಿಕ ಸಾಂಸ್ಕೃತಿಕ ವಿಭಾಗ ಸಂಚಾ ಲಕ ಸದಾನಂದ ಸುಲಾಯ, ಚಲನ ಚಿತ್ರ ನಟ ಶಿವಧ್ವಜ ಶೆಟ್ಟಿ ಮುಖ್ಯ ಅತಿಥಿಗಳಾಗಿ ಭಾಗವಹಿಸುವರು
ಕರ್ನಾಟಕ ಹಂಪಿ ವಿಶ್ವ ವಿದ್ಯಾಲಯದ ವಿಶ್ರಾಂತ ಕುಲಸಚಿವ ಡಾ. ಸುಬ್ಬಣ್ಣ ರೈ, ರಾಜೇಶ್ ರೈ ಚm್ಲ, ದಕ್ಷಿಣ ಕನ್ನಡ ಜಿಲ್ಲಾ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಮದನ ರೈ ಎಂಬಿವರನ್ನು ಸಮಾರಂಭದಲ್ಲಿ ಸನ್ಮಾನಿಸಲಾ ಗುವುದು
ಕಾಸರಗೋಡು ಜಿಲ್ಲಾ ಬಂಟರ ಸಂಘದ ಅಧ್ಯಕ್ಷ ವಕೀಲ ಬಿ. ಸುಬ್ಬಯ್ಯ ರೈ, ಮಾಜಿ ಅಧ್ಯಕ್ಷ ವಕೀಲ ಎ ಸದಾನಂದ ರೈ,ವಕೀಲ ಕೆ. ಮಹಾಬಲ ಶೆಟ್ಟಿ, ನಿವೃತ್ತ ಮುಖ್ಯೋಪಾಧ್ಯಾಯ ಬಂಟರ ಸಂಘದ ಹಿರಿಯ ಕಾರ್ಯಕರ್ತ ಎಸ್ ಎನ್ ರಾಮ ಶೆಟ್ಟಿ ಅತಿಥಿಗಳಾಗಿ ಭಾಗವಹಿಸುವರು.
ಬಂಟರ ಸಂಸ್ಕೃತಿ ಸಂಪ್ರದಾಯ ಗಳ ಕುರಿತು ಡಾ. ವಿದ್ಯಾ ಮೋಹನ ದಾಸ್ ರೈ ಉಪನ್ಯಾಸ ನೀಡುವರು ಕಾಸರಗೋಡು ವಲಯ ಬಂಟರ ಸಂಘದ ಅಧ್ಯಕ್ಷ ಸುಬ್ಬಣ್ಣ ಆಳ್ವ ಕುಚಿಕ್ಕಾಡ್ ಸನ್ಮಾನಿತರನ್ನು ಪರಿಚಯಿಸುವರು.