ಕಾಸರಗೋಡು: ಮನೆಯಿಂದ ಹೊರ ಹೋದ ವ್ಯಕ್ತಿ ಹಿಂತಿರುಗಲಿಲ್ಲ ವೆಂದು ದೂರಲಾಗಿದೆ. ಪೆರಿಯ ಕಲ್ಯೋಟ್ ಆರಾಟ್‌ಕಡವ್ ಹೌಸ್‌ನ ದಿ| ರಾಮನ್‌ರ ಪುತ್ರ ಪುರುಷೋತ್ತಮ (52) ನಾಪತ್ತೆಯಾ ದವರು. ಸಹೋದರ ಟಿ. ಕೃಷ್ಣನ್ ನೀಡಿದ ದೂರಿನಂತೆ ಬೇಕಲ ಪೊಲೀಸರು ಕೇಸು ದಾಖಲಿಸಿ ತನಿಖೆ ಆರಂಭಿಸಿದ್ದಾರೆ. ನಿನ್ನೆ ಬೆಳಿಗ್ಗೆ 6 ಗಂಟೆಗೆ ಪುರುಷೋತ್ತಮ ಮನೆಯಿಂದ ಹೊರ ಹೋಗಿದ್ದನು. ಆ ಬಳಿಕ ಅವರು ಹಿಂತಿರುಗಿರಲಿಲ್ಲ. ಈ ಹಿನ್ನೆಲೆಯಲ್ಲಿ ಸಹೋದರ ದೂರು ನೀಡಿದ್ದಾರೆ. ನಾಪತ್ತೆಯಾದ ಬಗ್ಗೆ ಪೊಲೀಸರು ನಡೆಸಿದ ತನಿಖೆ ಯಲ್ಲಿ ಕಾಞಂಗಾಡ್‌ನಲ್ಲಿ ಇವರನ್ನು ಕಂಡಿರುವುದಾಗಿ ಸೂಚನೆ ಲಭಿಸಿದೆ. ಅಡುಗೆ ಕಾರ್ಮಿಕರಾಗಿದ್ದಾರೆ.






