‘ಮನೆಯಿಂದ ಲಭಿಸುವ ಸಂಸ್ಕಾರದಿಂದ ಮಕ್ಕಳು ಸತ್ಪ್ರಜೆಗಳಾಗಿ ರೂಪು’
ಕಾಸರಗೋಡು: ಮನೆಯಿಂದ ಲಭಿಸುವ ಸಂಸ್ಕಾರದಿಂದ ಮಕ್ಕಳು ಸತ್ಪ್ರಜೆಗಳಾಗಿ ರೂಪುಗೊಳ್ಳುತ್ತಾರೆ. ಸದ್ಭಾವನೆಗಳ ಬೀಜಗಳನ್ನು ಬಿತ್ತಿ ಮಕ್ಕಳನ್ನು ಬೆಳೆಸಬೇಕೆಂದು ನಿವೃತ್ತ ಮುಖ್ಯೋಪಾಧ್ಯಾಯಿನಿ ಸವಿತಾ ಟೀಚರ್ ನುಡಿದರು. ಕೋಟೆಕಣಿ ಶ್ರೀ ಮಲ್ಲಿಕಾರ್ಜುನ ಬಾಲಗೋಕುಲದ ೮ನೇ ವಾರ್ಷಿಕದಂಗವಾಗಿ ಹಮ್ಮಿಕೊಂಡ ಮಾತೃಪೂಜನಾ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಬಾಲಗೋಕುಲದ ಅಧ್ಯಕ್ಷ ಪ್ರಕಾಶ್ ಕೋಟೆಕಣಿ ಅಧ್ಯಕ್ಷತೆ ವಹಿಸಿದ್ದರು. ಸಹಕಾರ ಭಾರತಿ ಪ್ರಾಂತ್ಯ ಕಾರ್ಯದರ್ಶಿ ನ್ಯಾಯವಾದಿ ಕರುಣಾಕರನ್ ನಂಬಿಯಾರ್ ಬೌದ್ಧಿಕ್ ನೀಡಿದರು. ಬಾಲಗೋಕುಲ ಜಿಲ್ಲಾ ರಕ್ಷಾಧಿಕಾರಿ ಶಂಕರನಾರಾಯಣ ಭಟ್, ನಗರಸಭಾ ಸದಸ್ಯ ವರಪ್ರಸಾದ್ ಕೋಟೆಕಣಿ ಉಪಸ್ಥಿತರಿದ್ದರು. ಬಾಲಗೋಕುಲ ಶಿಕ್ಷಕಿ ದೀಪ್ತಿ ಮೊದಕ್ ರಾಜ್ ಸ್ವಾಗತಿಸಿ, ಕಾರ್ಯದರ್ಶಿ ಭಾಗ್ಯರಾಜ್ ನಿರೂಪಿಸಿದರು. ಶಿಕ್ಷಕ ಧನೇಶ್ ವಂದಿಸಿದರು. ಬಾಲಗೋಕುಲದ ಮಕ್ಕಳಿಂದ ಮಾತೃಪೂಜನಾ ನಡೆಯಿತು.