ಮನೆಯಿಂದ ವಿದ್ಯುತ್ ಉಪಕರಣ ಕಳವು: ಆರೋಪಿ ಬಂಧನ
ಉಪ್ಪಳ: ನಿರ್ಮಾಣ ಹಂತದ ಮನೆಯಿಂದ ವಿದ್ಯುತ್ ಉಪಕರಣಗಳನ್ನು ಕಳವುಗೈದ ಆರೋಪಿಯನ್ನು ಮಂಜೇಶ್ವರ ಪೊಲೀಸರು ಕೆಲವೇ ಗಂಟೆಗಳೊಳಗೆ ಸೆರೆಹಿಡಿದಿದ್ದಾರೆ. ಪೆರಿಂಗಡಿ ಜನಪ್ರಿಯ ನಿವಾಸಿ ಮೊಹಮ್ಮದ್ ಇಕ್ಭಾಲ್ (44) ಎಂಬಾತ ಬಂಧಿತ ಆರೋಪಿಯಾಗಿದ್ದಾನೆ. ಐಲ ಮೈದಾನ ಬಳಿ ನಿರ್ಮಾಣ ನಡೆಯುತ್ತಿರುವ ಮನೆಯಿಂದ ಸುಮಾರು ೫೦ ಸಾವಿರ ರೂಪಾಯಿಗಳ ವಿದ್ಯುತ್ ಉಪಕರಣಗಳು ಕಳವಿಗೀಡಾಗಿತ್ತು. ಮೊನ್ನೆ ಬೆಳಿಗ್ಗೆ ಮನೆ ಮಾಲಕ ಅಬ್ದುಲ್ ರಜಾಕ್ ಮನೆಗೆ ತಲುಪಿದಾಗ ಬಾಗಿಲು ಮುರಿದು ಉಪPರಣಗಳನ್ನು ಕಳವು ನಡೆಸಿರುವುದು ಕಂಡುಬಂದಿತ್ತು. ಈ ಬಗ್ಗೆ ಅವರು ನೀಡಿದ ದೂರಿನಂತೆ ಕೇಸು ದಾಖಲಿಕೊಂಡು ಪೊಲೀಸರು ಆರೋಪಿಗಳನ್ನು ತಕ್ಷಣ ಸೆರೆಹಿಡಿದಿದ್ದಾರೆ.