ಮಹಿಳೆ ಬಾವಿಗೆ ಬಿದ್ದು ಸಾವನ್ನಪ್ಪಿದ ಸ್ಥಿತಿಯಲ್ಲಿ ಪತ್ತೆ
ಕಾಸರಗೋಡು: ಮಹಿಳೆಯೋರ್ವೆ ಬಾವಿಗೆ ಬಿದ್ದು ಸಾವನ್ನಪ್ಪಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಕಾಸರಗೋಡು ನೆಲ್ಲಿಕುಂಜೆ ಬೀಚ್ ರೋಡ್ ಸ್ವಾಮಿಕಟ್ಟೆ ಬಳಿಯ ನಿವಾಸಿ ಸೋಮಪ್ಪ ಪೂಜಾರಿ ಎಂಬವರ ಪತ್ನಿ ಸೀತಾ (77) ಸಾವನ್ನಪ್ಪಿದ ಮಹಿಳೆ. ಇವರು ಅವರ ತರವಾಡು ಮನೆ ಬಳಿಯ ಆವರಣವಿಲ್ಲದ ಬಾವಿಯಲ್ಲಿ ನಿನ್ನೆ ಸಾವನ್ನಪ್ಪಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ವಿಷಯ ತಿಳಿದ ಕಾಸರಗೋಡು ಅಗ್ನಿ ಶಾಮಕದಳ ಸ್ಥಳಕ್ಕೆ ಆಗಮಿಸಿ ಮೃತ ದೇಹವನ್ನು ಬಾವಿಯಿಂದ ಮೇಲಕ್ಕೆತ್ತಿ ಜನರಲ್ ಆಸ್ಪತ್ರೆಗೆ ಸಾಗಿಸಿದರು. ಕಾಸರಗೋಡು ಪೊಲೀಸರು ಈ ಬಗ್ಗೆ ಪ್ರಕರಣ ದಾಖಲಿಸಿ ತನಿಖೆ ಆರಂಭಿಸಿದ್ದಾರೆ.