92ರ ವೃದ್ಧೆ  ಪರ ಸಿಪಿಎಂ ನೇತಾರ ನಕಲಿ ಮತ ಚಲಾಯಿಸಿದ ಬಗ್ಗೆ ದೂರು: ಚುನಾವಣಾ ಸಿಬ್ಬಂದಿಗಳ ಅಮಾನತು

ಕಾಸರಗೋಡು: ಕಾಸರಗೋಡು ಲೋಕಸಭಾ ಕ್ಷೇತ್ರಕ್ಕೆ ಒಳಪಟ್ಟ ಕಲ್ಯಾಶ್ಶೇರಿ ವಿಧಾನಸಭಾ ಕ್ಷೇತ್ರದಲ್ಲಿ ೯೨ರ ಹರೆಯದ ವೃದ್ಧೆಯ ಪರವಾಗಿ ಸಿಪಿಎಂ ನೇತಾರನೋರ್ವ ಮತಚಲಾ ಯಿಸಿರುವುದಾಗಿ ದೂರು ಉಂಟಾಗಿದೆ. 

ಮತಗಟ್ಟೆಗಳಿಗೆ  ನೇರವಾಗಿ ಆಗಮಿಸಿ ಮತ ಚಲಾಯಿಸಲು ಸಾಧ್ಯವಾಗದೇ ಇರುವ ಹಿರಿಯ ವಯೋಮಿತಿಯವರು, ಶಯ್ಯಾಸ್ಥಿತಿಯಲ್ಲಿರುವವರು ಮತ್ತು ವಿಕಲ ಚೇತನರಿಗೆ  ಅವರ ಮನೆಯಲ್ಲೇ ಮತ ಚಲಾಯಿಸಲು ಅನುಕೂಲಕರವಾಗುವಂತೆ ಚುನಾವಣಾ ಸಿಬ್ಬಂದಿಗಳು  ನೇರವಾಗಿ  ಅವರ ಮನೆಗೆ ತೆರಳಿ ಮತ ಚಲಾಯಿಸುವ ಪ್ರಕ್ರಿಯೆಗೆ ಎರಡು ದಿನಗಳ ಹಿಂದೆಯೇ ಚುನಾವಣಾ ಆಯೋಗ ಚಾಲನೆ ನೀಡಿದೆ. ಇದರಂತೆ ಕಾಸರಗೋಡು  ಲೋಕಸಭಾ ಕ್ಷೇತ್ರಕ್ಕೊಳಪಟ್ಟ ಕಲ್ಯಾಶ್ಶೇರಿ ವಿಧಾನಸಭಾ ಕ್ಷೇತ್ರದ ಪಾರಕಡವಿನ ದೇವಿ (೯೨) ಎಂಬವರ ಮನೆಗೆ ಚುನಾವಣಾ ಸಿಬ್ಬಂದಿಗಳು ನಿನ್ನೆ ನೇರವಾಗಿ ತೆರಳಿದ್ದರು. ಆ  ವೇಳೆ  ಮತ ಚಲಾಯಿಸಲು ಅವರಿಗೆ ಚುನಾವಣಾ ಸಿಬ್ಬಂದಿಗಳು ನೀಡಿದ ಬ್ಯಾಲೆಟ್ ಪೇಪರ್‌ನಲ್ಲಿ ದೇವಿ ಮತ ಚಲಾಯಿಸಲೆತ್ನಿಸುತ್ತಿರುವ ವೇಳೆ ಅಲ್ಲಿದ್ದ ಕಲ್ಯಾಶ್ಶೇರಿಯ ಸಿಪಿಎಂನ  ಮಾಜಿ ಬ್ರಾಂಚ್ ಕಾರ್ಯದರ್ಶಿ ಹಾಗೂ ಪ್ರಸ್ತುತ ಮತಗಟ್ಟೆಯ ಎಡರಂಗದ ಏಜೆಂಟ್ ಆಗಿರುವ ಗಣೇಶನ್ ಎಂಬವರು ದೇವಿಯವರ ಮತ ಚಲಾಯಿಸಿದರೆಂದು ದೂರಲಾಗಿದೆ.  ಮತ ಚಲಾಯಿಸುವ ಸಿಸಿ ಟಿವಿ ದೃಶ್ಯಗಳೂ ಈಗ ಹೊರಬಂದಿದೆ. ಈ ಬಗ್ಗೆ ದೂರು ಕೇಳಿಬಂದ  ಬೆನ್ನಲ್ಲೇ ನಕಲಿ ಮತದಾನಕ್ಕೆ ಅವಕಾಶ ಮಾಡಿಕೊಟ್ಟ ಆರೋಪದಂತೆ ಸ್ಪೆಷಲ್ ಪೊಲಿಂಗ್ ಆಫೀಸರ್, ಪೋಲಿಂಗ್ ಅಸಿಸ್ಟೆಂಟ್ ಮೈಕ್ರೋ ಒಬ್ಸರ್ವರ್, ಸ್ಪೆಷಲ್ ಪೊಲೀಸ್ ಆಫೀಸರ್ ಮತ್ತು ವೀಡಿಯೋಗ್ರಾಫರ್ ಎಂಬಿವರನ್ನು ಕಣ್ಣೂರು ಜಿಲ್ಲಾಧಿಕಾರಿ ಅರುಣ್ ಕೆ ವಿಜಯನ್ ತಕ್ಷಣದಿಂದ ಸೇವೆಯಿಂದ ಅಮಾನತುಗೊಳಿಸಿದ್ದಾರೆ. ಮಾತ್ರವಲ್ಲ ಈ ಬಗ್ಗೆ ಉನ್ನತಮಟ್ಟದ ತನಿಖೆ ನಡೆಸುವಂತೆಯೂ ಅವರು ಶಿಫಾರಸು ಮಾಡಿದ್ದಾರೆ.  ಕಾನೂನುಬಾಹಿರವಾಗಿ ಕಾರ್ಯವೆಸಗುವ ವ್ಯಕ್ತಿಗಳು ಮತ್ತು ಚುನಾವಣಾ ತಂಡದ ವಿರುದ್ಧ ಕ್ರಿಮಿನಲ್ ಕ್ರಮ ಕೈಗೊಳ್ಳಲು ಕಣ್ಣೂರು ಸಿಟಿ ಪೊಲೀಸ್ ಕಮಿಶನರ್ ವಿರುದ್ಧ ಕಲ್ಯಾಶ್ಶೇರಿ ಉಪಚುನಾವಣಾಧಿಕಾರಿ ಕಣ್ಣ್ಣಪುರಂ ಪೊಲೀಸ್ ಠಾಣೆಗೂ   ವರದಿ ಸಲ್ಲಿಸಿದ್ದಾರೆ.

Leave a Reply

Your email address will not be published. Required fields are marked *

You cannot copy content of this page